ತುಮಕೂರು: ಬಿಜೆಪಿ ಶಾಸಕ ಬಿ.ಸುರೇಶ್ಗೌಡ ಬಿಜೆಪಿಗಿಂತಲೂ ಕಾಂಗ್ರೆಸ್ ಬಗ್ಗೆಯೇ ಹೆಚ್ಚು ಚಿಂತಿಸುತ್ತಾರೆ ಅವರಿಗೆ ಕಾಂಗ್ರೆಸ್ ಬಗ್ಗೆ ಅಭಿಮಾನವಿದ್ದು ಡಾ.ಜಿ.ಪರಮೇಶ್ವರ್ ಒಪ್ಪಿದರೆ ಶ್ರೀದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಬಾಂಬ್ ಸಿಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಆಯೋಜಿಸಿದ್ದ ತುಮಕೂರು ದಸರಾ ಲಾಂಛನ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿಯೇ ಕುಳಿತಿದ್ದ ಸುರೇಶ್ಗೌಡ ಕೂಡ ಹೇಳಿಕೆಗೆ ಪ್ರತಿರೋಧ ತೋರದೆ ನಗುತ್ತಿದ್ದರು.
ಇದಕ್ಕೂ ಪೂರ್ವದಲ್ಲಿ ಮಾತನಾಡಿದ್ದ ಬಿ.ಸುರೇಶ್ಗೌಡ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಹಾಡಿಹೊಗಳಿದರು, ತುಮಕೂರಿನಲ್ಲಿ ದಸರಾ ಆರಂಭಿಸಿರುವ ಪರಮೇಶ್ವರ್ ಮೈಸೂರು ದಸರಾ ಸಂದರ್ಭದಲ್ಲಿಯೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಅವಕಾಶ ಪಡೆಯಬೇಕು ಎಂದು ಆಶಿಸಿದರು.
ಪರಮೇಶ್ವರ್ ಮುಖ್ಯಮಂತ್ರಿಯಾಗುವುದು ಕುಣಿಗಲ್ ಶಾಸಕ ರಂಗನಾಥ್ಗೆ ಬೇಸರ ಮೂಡಿಸಬಹುದು ಆದರೆ,ಪರಮೇಶ್ವರ್ ರಾಜ್ಯದ ಸಿಎಂ ಆಗಬೇಕು ಮೈಸೂರು ದಸರಾದಲ್ಲಿಯೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಬೇಕು ಎಂಬುದು ನಮ್ಮೆಲ್ಲರ ಬಯಕೆ ಎಂದು ವಿಷಯ ಪ್ರಸ್ತಾಪಿಸಿದ್ದರು.