ತುಮಕೂರು: ಬೆಸ್ಕಾಂ ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ನಗರದ ಹೊರಪೇಟೆಯಲ್ಲಿರುವ ಉಪವಿಭಾಗ ಕಚೇರಿಯಲ್ಲಿ ಡಿ.21ರ ಮಧ್ಯಾಹ್ನ 3ಕ್ಕೆ ಗ್ರಾಹಕ ಸಂವಾದ ಸಭೆ ಏರ್ಪಡಿಸಲಾಗಿದೆ.
ಹೆಬ್ಬೂರು, ಗೂಳೂರು, ಸಿದ್ಧಾರ್ಥನಗರ ಶಾಖೆಗಳ ವ್ಯಾಪ್ತಿಯಲ್ಲಿರುವ ಭೀಮಸಂದ್ರ ಹಾಗೂ ಹೆಗ್ಗೆರೆ, ಮಲ್ಲಸಂದ್ರ, ದೊಡ್ಡನಾರವಂಗಲ, ಗೂಳೂರು, ಹೆತ್ತೇನಹಳ್ಳಿ, ಹೊಳಕಲ್ಲು, ನಾಗವಲ್ಲಿ, ಕಣಕುಪ್ಪೆ, ಗಂಗೋನಹಳ್ಳಿ, ಅರಿಯೂರು, ಹೆಬ್ಬೂರು, ಗಳಿಗೇನಹಳ್ಳಿ, ಬಳ್ಳಗೆರೆ, ನಿಡುವಳಲು, ಸಿರಿವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಹಕರು ಸಂವಾದ ಸಭೆಯಲ್ಲಿ ಪಾಲ್ಗೊಂಡು ತಮ್ಮ ದೂರು ಸಲ್ಲಿಸಿ ಪರಿಹರಿಸಿಕೊಳ್ಳಬಹುದು.
ಬೆಸ್ಕಾಂ ಗ್ರಾಮೀಣ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ನಗರದ ಕೋತಿ ತೋಪು ಹೊರಪೇಟೆ ವೃತ್ತದಲ್ಲಿ ಡಿಸೆಂಬರ್ 21ರ ಮಧ್ಯಾಹ್ನ 3 ಗಂಟೆಗೆ ಗ್ರಾಹಕ ಸಂವಾದ ಸಭೆ ಏರ್ಪಡಿಸಲಾಗಿದೆ.
ಕೋರಾ, ಸಿಟಿ ಕೆರೆ, ಬೆಳ್ಳಾವಿ ಶಾಖೆ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಹಕರು ಸಂವಾದ ಸಭೆಯಲ್ಲಿ ಭಾಗವಹಿಸಬಹುದು.