ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗದ ವ್ಯಾಪ್ತಿಯಲ್ಲಿ ತ್ರೆೃಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 21 ಮತ್ತು 22ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಡಿಸೆಂಬರ್ 21ರಂದು ಅಂಕಸಂದ್ರ, ದೊಡ್ಡಗುಣಿ, ಚೇಳೂರು, ಹೊಸಕೆರೆ, ಹಾಗಲವಾಡಿ, ಊರ್ಡಿಗೆರೆ ಉಪಸ್ಥಾವರದ ಎಲ್ಲಾ 11 ಕೆವಿ ಪೂರಕಗಳಿಗೆ ಒಳಪಡುವ ಗ್ರಾಮ ಹಾಗೂ ಡಿಸೆಂಬರ್ 22ರಂದು ಸಿಟಿ ಕೆರೆ, ಮೆಳೆಕೋಟೆ, ಬೆಳಧರ, ಕೋರಾ, ತುಮಕೂರು ಉಪಸ್ಥಾವರದ ಎಲ್ಲಾ 11 ಕೆವಿ ಪೂರಕಗಳಿಗೆ ಒಳಪಡುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.