ತುಮಕೂರು: ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ಸೇರಿ 6 ತಾಲ್ಲೂಕುಗಳ ಶಾಲಾ ಸಿದ್ಧತಾ ಕೇಂದ್ರಗಳಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಥೆರಫಿ ಸೇವೆಗಳನ್ನು ನೀಡಲು ಫಿಜಿಯೋಥೆರಪಿಸ್ಟ್ ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದಡಿ ತಾತ್ಕಾಲಿಕವಾಗಿ 2026ರ ಮೇ.31ರ ವರೆಗೂ ನೇಮಿಸಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದವರು ದಿನದ ಅವಧಿ ಆಧಾರದಲ್ಲಿ ವಾರದಲ್ಲಿ 2 ದಿನ ಕಾರ್ಯ ನಿರ್ವಹಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮೋ ಇನ್ ಫಿಜಿಯೋಥೆರಪಿ ಅಥವಾ ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಅಥವಾ ಮಾಸ್ಟರ್ ಆಫ್ ಫಿಜಿಯೋಥೆರಪಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭರ್ತಿ ಮಾಡಿದ ಸ್ವ- ವಿವರವುಳ್ಳ ಅರ್ಜಿಯನ್ನು ನವೆಂಬರ್ 12ರೊಳಗಾಗಿ ಉಪನಿರ್ದೇಶಕ ಹಾಗೂ ಜಿಲ್ಲಾ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಡಾ: ರಾಧಾಕೃಷ್ಣನ್ ರಸ್ತೆ, ಎಸ್.ಎಸ್. ಪುರಂ, ತುಮಕೂರು. ಇವರಿಗೆ ವಿದ್ಯಾರ್ಹತೆ ಹಾಗೂ ಮತ್ತಿತರ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.