ಶಿಕ್ಷಣ ಫೌಂಡೇಶನ್ ವತಿಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತರಬೇತಿ ನಡೆಯಿತು. ತರಬೇತುದಾರೆ ಆಶಾ ಶೆಟ್ಟಿ, ಎಚ್.ವಿ ಇಬ್ರಾಹಿಂಪುರ, ಯೋಜನಾಧಿಕಾರಿ ಸಂದೇಶ್ ಮೊದಲಾದವರಿದ್ದರು 
ಜಿಲ್ಲೆ

ವಿದ್ಯುತ್​ ಮೋಟಾರ್​ ರೀವೈಂಡಿಂಗ್​ ತರಬೇತಿಗೆ ಅರ್ಜಿ

ತುಮಕೂರು: ರುಡ್​ಸೆಟ್​ ಸಂಸ್ಥೆ ವತಿಯಿಂದ ವಿದ್ಯುತ್​ ಮೋಟಾರ್​ ರೀವೈಂಡಿಂಗ್​ ಕುರಿತ 30 ದಿನಗಳ ಉಚಿತ ತರಬೇತಿ ನೀಡಲು ಗ್ರಾಮೀಣ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್​ಸೆಟ್​ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊ.9380162042, 9380220884, 9113880324 ಸಂಪರ್ಕಿಸಿ.