ಜಿಲ್ಲೆ

ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಮೈಸೂರಿನ ಜೆಎಸ್​ಎಸ್​ ವಿಶೇಷಚೇತನರ ಪಾಲಿಟೆಕ್ನಿಕ್​ ವತಿಯಿಂದ 3 ವರ್ಷಗಳ ಅವಧಿಯ ವಿವಿಧ ಡಿಪ್ಲೊಮಾ ಕೋರ್ಸ್​ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂ.23ರ ವರೆಗೆ ವಿಸ್ತರಿಸಲಾಗಿದೆ. ಅರ್ಹ ವಿಕಲಚೇತನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

ಆರ್ಕಿಟೆಕ್ಚರ್​ ಅಸಿಸ್ಟೆಂಟ್​ಷಿಪ್​, ಕಮರ್ಷಿಯಲ್​ ಪ್ರಾಕ್ಟೀಸ್​, ಕಂಪ್ಯೂಟರ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​, ಜ್ಯುಯಲರಿ ಡಿಸೈನ್​ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್​ ಮತ್ತು ಕಮ್ಯೂನಿಕೇಷನ್​ ಇಂಜಿನಿಯರಿಂಗ್​, ಕಂಪ್ಯೂಟರ್​ ಅಪ್ಲಿಕೇಷನ್ಸ್​(ಫಾರ್​ ವಿಜ್ಯುವಲಿ ಇಂಪೇರ್ಡ್​), ಅಪೆರಲ್​ ಡಿಸೈನ್​ ಮತ್ತು ಫ್ಯಾಬ್ರಿಕೇಷನ್​ ಟೆಕ್ನಾಲಜಿ, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ & ಎಲೆಕ್ಟ್ರಿಕ್​ ವೆಹಿಕಲ್​ ಟೆಕ್ನಾಲಜಿ ಕೋರ್ಸ್​ಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿದ್ಯಾರ್ಥಿ ವೇತನದ ಆರ್ಥಿಕ ಸಹಾಯ ದೊರೆಯುತ್ತದೆ. ಪಾಲಿಟೆಕ್ನಿಕ್​ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡಲಾಗುವುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯದ ಸೌಲಭ್ಯ ಕಲ್ಪಿಸಲಾಗುವುದು.

ಮಾಹಿತಿಗೆ ವೆಬ್​ಸೈಟ್​, ಇ-ಮೇಲ್​ ಅಥವಾ ಮೊ.9844644937 ಸಂಪರ್ಕಿಸಿ, ಭರ್ತಿ ಮಾಡಿದ ಅರ್ಜಿಯನ್ನು ಜೂನ್​ 23ರೊಳಗೆ ತಲುಪಿಸಬಹುದು.