ಜಿಲ್ಲೆ

ಮಕ್ಕಳ ಪಾಲನೆಗೆ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಪಾಲನೆ ಮತ್ತು ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳನ್ನು ಅವರ ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬದಲ್ಲಿ ತಾತ್ಕಾಲಿಕವಾಗಿ ಪಾಲನೆ ಮತ್ತು ಪೋಷಣೆ ಮಾಡುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಯೊಂದು ಮಗುವಿಗೂ ಕುಟುಂಬದ ವಾತಾವರಣದಲ್ಲಿ ಬೆಳೆಯುವ ಹಕ್ಕಿರುತ್ತದೆ. ಆದರೆ ಕಾರಣಾಂತರದಿಂದ ಕೆಲವು ಮಕ್ಕಳನ್ನು ಸರ್ಕಾರಿ, ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಗುವನ್ನು ಮಗುವಿನ ಸ್ವಂತ ಕುಟುಂಬದಲ್ಲಿರಿಸಲು ಸಾಧ್ಯವಾಗದಿದ್ದಾಗ ಪೋಷಕತ್ವ ಕಾರ್ಯಕ್ರಮದಡಿ ಬಾಲನ್ಯಾಯ ಕಾಯ್ದೆ 2015ರನ್ವಯ ಇತರೆ ಕುಟುಂಬದಲ್ಲಿ ಬೆಳೆಯಲು ಮಗುವಿನ ಹಿತದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿ ತೀಮಾರ್ನ ಕೈಗೊಂಡಿದೆ.

ತುಮಕೂರಿನ ಬಾಲಮಂದಿರಗಳಲ್ಲಿರುವ 6ರಿಂದ -18 ವರ್ಷದ ಹೆಣ್ಣು ಮತ್ತು ಗಂಡು ಮಕ್ಕಳನ್ನು ಪಾಲನೆ ಮತ್ತು ಪೋಷಣೆ ಮಾಡಲು ಆಸಕ್ತಿ ಹೊಂದಿರುವ ಪೋಷಕರು ಅರ್ಜಿ ಸಲ್ಲಿಸಬಹುದು.

ಆಸಕ್ತರು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊದಲನೇ ಮಹಡಿ, ಮಹಾತ್ಮಗಾಂಧಿ ಕ್ರೀಡಾಂಗಣ, ಕುವೆಂಪು ನಗರ, ತುಮಕೂರು. ಇವರಿಗೆ ಸಲ್ಲಿಸಬಹುದಾಗಿದೆ.