ಜಿಲ್ಲೆ

ಕೈಮಗ್ಗ ನೇಕಾರರಿಂದ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ಸಲಕರಣೆ ಹಾಗೂ ದುಡಿಮೆ ಬಂಡವಾಳಕ್ಕಾಗಿ ವಾಣಿಜ್ಯ ಬ್ಯಾಂಕ್​ಗಳಿಂದ ಪಡೆಯುವ ಸಾಲದ ಮೇಲೆ ಶೇ.20ರಷ್ಟು ಅಥವಾ ಗರಿಷ್ಠ 25000 ರೂ.ಗಳವರೆಗೆ ಮಾರ್ಜಿನ್​ ಮನಿ ನೀಡಲು ಜಿಲ್ಲೆಯ ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಿದೆ.

ವೃತ್ತಿಯಲ್ಲಿ ತೊಡಗಿರುವ ಆಸಕ್ತ ಕೈಮಗ್ಗ ನೇಕಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ನೇಕಾರರ ಗುರುತಿನ ಚೀಟಿ ಅಥವಾ ಆರೋಗ್ಯ ವಿಮಾ ಕಾರ್ಡ್​, ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕ್​ ಪಾಸ್​ ಪುಸ್ತಕದ ಜೆರಾಕ್ಸ್​ ಪ್ರತಿಯನ್ನು ಲಗತ್ತಿಸಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, 5ನೇ ಮುಖ್ಯರಸ್ತೆ, ಸಿದ್ದಗಂಗಾ ಬಡಾವಣೆ, ತುಮಕೂರು. ಇವರಿಗೆ ಸಲ್ಲಿಸಬೇಕು.

ಮಾಹಿತಿಗೆ ದೂ.0816 -2275370 ಸಂಪರ್ಕಿಸಿ.