ಜಿಲ್ಲೆ

ಅಪಘಾತದಲ್ಲಿ ಗ್ರಾಪಂ ಸಿಬ್ಬಂದಿ ಮೃತ

ತುರುವೇಕೆರೆ: ತಾಲೂಕಿನ ಮಾಯಸಂದ್ರ - ಜೋಡಗಟ್ಟೆ ಬಳಿ ಬಾರಿ ಕ್ಯಾಂಟರ್ ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಭೈತರಹೊಸಳ್ಳಿ ಗ್ರಾಪಂ ಕಂಪ್ಯೂಟರ್​ ಆಪರೇಟರ್​ ಲೀಲಾವತಿ (30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಡಿ.ಎನ್.ಪುರಕ್ಕೆ ಶುಕ್ರವಾರ ಸಾಯಂಕಾಲ ನಾಲ್ಕು ಗಂಟೆಯ ಸಮಯದಲ್ಲಿ ತಮ್ಮ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದರು. ಇದೇ ಸಂಧರ್ಭದಲ್ಲಿ ಬೆಳ್ಳೂರು ಕಡೆಯಿಂದ ಬಹಳ ವೇಗವಾಗಿ ಬಂದ ಕ್ಯಾಂಟರ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರವಾಹನವನ್ನು ಕ್ಯಾಂಟರ್​ ಎಳೆದೊಯ್ದಿದೆ. ಪರಿಣಾಮವಾಗಿ ಲೀಲಾವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದದಾರೆ. ಆಕೆಯ ಶವ ಸಂಪೂರ್ಣವಾಗಿ ಜಜ್ಜಿ ಹೋಗಿದೆ. ಅಪಘಾತವಾದ ನಂತರ ಚಾಲಕ ಕ್ಯಾಂಟರ್ ನಿಲ್ಲಿಸದೇ ಪರಾರಿಯಾಗಿದ್ದಾನೆ.

ಮೃತ ಲೀಲಾವತಿಗೆ ಪತಿ ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.