ಜಿಲ್ಲೆ

ಓಮಿನಿ, ಡಿವಿಎಸ್ ಎಕ್ಸ್ಎಲ್ ಮುಖಾಮುಖಿ; ಸವಾರ ಸಾವು

ಡಾ.ಶ್ರೀಹರ್ಷ ಸೋರಲಮಾವು

ತಿಪಟೂರು: ಓಮಿನಿ ಹಾಗೂ ಟಿವಿಎಸ್ ಮೊಪೆಡ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸಾವನ್ನಪ್ಪಿರುವ ಘಟನೆ ಹೊನ್ನವಳ್ಳಿಯಲ್ಲಿ ನಡೆದಿದೆ.

ಹೊನ್ನವಳ್ಳಿಯ ಲೋಕೇಶ್(44) ಮೃತ. ಟಿ.ವಿ.ಎಸ್ ಮೊಪೆಡ್‌ನಲ್ಲಿ ಹೋಗುತ್ತಿದ್ದಾಗ ಮಾರುತಿ ಓಮ್ನಿ ವ್ಯಾನಿಗೆ ಮುಖಮುಖಿ ಡಿಕ್ಕಿ ಸಂಭವಿಸಿದ್ದಾಗ ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಹೋಗುವ ಮಾರ್ಗಮದ್ಯೆ ಮೃತಪಟ್ಟಿದ್ದಾರೆ.

ಮಾರುತಿ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದಾತ ಮಂಜುನಾಥಪುರದ ಪ್ರೇಮಕುಮಾರ್ ವಿರುದ್ಧ ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.