ಜಿಲ್ಲೆ

ಬೆಳಧರ ಬಳಿ ಬೀಕರ ಅಪಘಾತ, ಎರಡು ಸಾವು

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತಾಲೂಕಿನ ಬೆಳಧರ ಸಮೀಪದದಲ್ಲಿ ಶನಿವಾರ ಸಂಜೆ ಖಾಸಗಿ ಬಸ್​ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರಿನಿಂದ ಕೊರಟಗೆರೆ ಕಡೆಗೆ ತೆರಳುತ್ತಿದ್ದ ಕಾರು ಓವರ್​ಟೇಕ್​ ಮಾಡುವ ಆತುರದಲ್ಲಿ ಬಸ್​ಗೆ ಮುಖಾಮುಖಿಯಾಗಿದೆ. ಮೃತರು ಹಾಗೂ ಗಾಯಾಳುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೋರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.