ಜಿಲ್ಲೆ

3 ದಿನಗಳ ಕಮ್ಮಟಕ್ಕೆ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾವೇರಿ ಜಿಲ್ಲೆ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ "ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು' ಕುರಿತು 3 ದಿನಗಳ ಕಮ್ಮಟ ಹಮ್ಮಿಕೊಂಡಿದ್ದು, ಕಮ್ಮಟದಲ್ಲಿ ಭಾಗವಹಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು.

ಗೋಟಗೋಡಿ ಕರ್ನಾಟಕ ಜನಪದ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್​ ಕೊನೆಯ ವಾರದಲ್ಲಿ ಕಮ್ಮಟ ನಡೆಸಲು ಉದ್ದೇಶಿಸಿದ್ದು, ಆಸಕ್ತ 20 ರಿಂದ 45 ವರ್ಷದೊಳಗಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅಕ್ಟೋಬರ್​ 8 ಕಡೆಯ ದಿನ. ಮಾಹಿತಿಗೆ ಜಾಲತಾಣ http://karnatakasahithyaacademy.org ಅನ್ನು ವೀಕ್ಷಿಸಬಹುದು.