ತುಮಕೂರು: ಜಿಲ್ಲೆಯ ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹೆಬ್ಬೂರು ಠಾಣೆ ಪೊಲೀಸರು ಪತ್ತೆಹಚ್ಚಿದ್ದು ಬರೋಬ್ಬರಿ 14 ಲಕ್ಷ ರೂ. ಮೌಲ್ಯದ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ರಾಜೀವ್‌ಗಾಂಧಿ ನಗರದ ಇರ್ಫಾನ್(21) ಬಂಧಿತ ಆರೋಪಿ. ಬಂಧಿತನಿAದ ಆರು ಹೊಂಡಾ ಡಿಯೋ, ಮೂರು ಹೊಂಡಾ ಆಕ್ಟಿವಾ, ಒಂದು ಸ್ಪೆಂಡರ್ ಪ್ಲೆಸ್, 1 ಪ್ಯಾಷನ್‌ಪ್ರೊ, ಒಂದು ಡಿಸ್ಕವರ್ ಸೇರಿ 14 ಲಕ್ಷ ರೂ. ಮೌಲ್ಯದ ದ್ವಿಚಕ್ರವಾಹನ ಪತ್ತೆಯಾಗಿವೆ.