ಜಿಲ್ಲೆ

ತುಮಕೂರು ವಿವಿಗೆ ಯೂನಿಸೆಫ್​ ತಂಡ

ತುಮಕೂರು: ತುಮಕೂರು ವಿವಿ ಆದ್ಯತೆಯ ಕಾರ್ಯಕ್ರಮ ಎನ್ನಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ ವೀಕ್ಷಿಸಲು ವಿಶ್ವಸಂಸ್ಥೆ ಅಂಗಸಂಸ್ಥೆ ಯೂನಿಸೆಫ್​ ದಕ್ಷಿಣ ಭಾರತ ವಲಯ ಪ್ರತಿನಿಧಿಗಳ ತಂಡ ಶುಕ್ರವಾರ ತುಮಕೂರು ವಿವಿಗೆ ಭೇಟಿ ನೀಡಿ ಪರಿಶೀಲಿಸಿತು.

ಮಕ್ಕಳ ಸುರಕ್ಷತಾ ತಜ್ಞೆ ಸೋನಿಕುಟ್ಟಿ ಜಾರ್ಜ್​ ಮಾತನಾಡಿ, ಭಾರತದಲ್ಲಿ ಶಾಲಾ ಮಟ್ಟದಲ್ಲಿ ಇಂತಹ ಯೋಜನೆಗಳನ್ನು ಗಮನಿಸಿದ್ದೇವೆ. ಆದರೆ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಇಂತಹ ಯೋಜನೆಗಳು ಇರಲಿಲ್ಲ. ಇದೊಂದು ಮಾದರಿಯಾಗುವ ಯೋಜನೆಯಾಗಿದೆ. ವಿಶ್ವಮಟ್ಟದಲ್ಲಿ ಗುರುತಿಸಲ್ಪಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವಂತೆ ಶಿಫಾರಸು ಮಾಡಲಾಗುವುದು ಎಂದರು.

ಗ್ರಾಮೀಣ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಯೋಜನೆಗೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.