ಜಿಲ್ಲೆ

ಬೈಕ್ ರೈಡ್ ಟು ಸೇವ್ ಕುಣಿಗಲ್ ಸ್ಟಡ್ ಫಾರ್ಮ್

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಐತಿಹಾಸಿಕ ಕುಣಿಗಲ್ ಕುದುರೆ ಫಾರ್ಮ್ ಉಳಿಸುವಂತೆ ಆಗ್ರಹಿಸಿ ಬೆಂಗಳೂರಿನ ಬೈಕ್ ರೈಡರ್ಸ್ ತಂಡಗಳು ಭಾನುವಾರ ಬೆಂಗಳೂರಿನಿಂದ ಕುಣಿಗಲ್ ವರೆಗೂ ಬೈಕ್ ರ‍್ಯಾಲಿ ನಡೆಸಿದವು.

ಬೈಕ್‌ರೈಡ್ ಟು ಸೇವ್ ಹೆರಿಟೇಜ್ ಕುಣಿಗಲ್ ಸ್ಟಡ್ ಪಾರ್ಮ್ (ಪಾರಂಪರಿಕ ಕುಣಿಗಲ್ ಕುದುರೆ ಫಾರ್ಮ್ ಉಳಿಸಲು ಬೈಕ್ ರ‍್ಯಾಲಿ) ಘೋಷಣೆಯಡಿ ಬೆಂಗಳೂರಿನ ಜಯನಗರದಿಂದ ಬೆಳಗ್ಗೆ 8ಕ್ಕೆ ಆರಂಭವಾದ ಬೈಕ್ ರ‍್ಯಾಲಿಯಲ್ಲಿ 30ಕ್ಕು ಹೆಚ್ಚು ಬೈಕ್, 10 ಕಾರುಗಳಲ್ಲಿ 100 ಮಂದಿಗೆ ಹೆಚ್ಚು ಸ್ಟಡ್ ಫಾರ್ಮ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ರ‍್ಯಾಲಿ ಕುಣಿಗಲ್ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್ ಮುಖಂಡ ಡಿ.ಎನ್.ಜಗದೀಶ್, ಜಿ.ಕೆ.ನಾಗಣ್ಣ, ಕುಣಿಗಲ್ ಪ್ರಕಾಶ್ , ತರೀಕೆರೆ ಪ್ರಸನ್ನ ಸ್ವಾಗತಿಸಿ ಬರಮಾಡಿಕೊಂಡರು.

ವೃಕ್ಷ ವೈದ್ಯ ವಿಜಯ್ ನಿಶಾಂತ್ ಅವರ ವೃಕ್ಷ ಫೌಂಡೇಷನ್ ವತಿಯಿಂದ ಆಯೋಜನೆಗೊಂಡಿರುವ ಬೈಕ್ ರ‍್ಯಾಲಿಯಲ್ಲಿ ಬೆಂಗಳೂರು ಮಡ್‌ಸ್ಟರ್ಸ್, ಬೈಕರ್ಸ್ ಆಫ್ ಇಂಡಿಯಾ, ಬೆಂಗಳೂರು ಆರ್‌ಡಿ350 ಕ್ಲಬ್, ಬೈಕರ್ಸ್ ಸೇವಿಯರ್ಸ್ ಬೆಂಗಳೂರು, ಭಾರತ್ ಆನ್ ವ್ಹೀಲ್ಸ್, ಯೂನಿಟಿ ಆಫ್ ಹ್ಯುಮಾನಿಟಿ, ಡಾ.ಪಿ.ಆರ್.ಕೆ.ಕ್ಲಬ್, ಟಾರ್ಕ್ ಮತ್ತು ಟ್ರಯಲ್ಅ್, ರೋಡ್ ವಾಂಡರ್ಸ್, ದಿ ಡೋಮï ಬೈಕರ್ಸ್ ತಂಡಗಳ ಭಾಗವಹಿಸಿದ್ದು ಮಡ್‌ಸ್ಟರ್ಸ್ನ ಖಲೀಂ, ಬೆಂಗಳೂರು ಆರ್‌ಡಿ350 ಕ್ಲಬï‌ನ ಆರ್.ಗಿರೀಶ್ ಕುಮಾರ್, ಅಂಗವಿಕಲೆ ಪದ್ಮಾ ಪ್ರಿಯಾ, ಪರಿಸರ ಪ್ರೇಮಿಗಳು, ಮಕ್ಕಳು ಈ ಅಭಿಯಾನದ ಭಾಗವಾಗಿದ್ದರು.

ಕುಣಿಗಲ್ ಸ್ಟಡ್‌ಫಾರ್ಮ್ ಉಳಿಸಿ!:

ಬೈಕ್ ಕ್ಯಾಲಿ ಏಕೈಕ ಉದ್ದೇಶ ಐತಿಹಾಸಿಕ ಕುಣಿಗಲ್ ಸ್ಟಡ್‌ಫಾರ್ಮ್ ಉಳಿಸಿ ಎಂಬುದಷ್ಟೇ . ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಕುದುರೆ ಫಾರ್ಮ್ ಅನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕೆಂಬುದಷ್ಟೇ ನಮ್ಮ ಒತ್ತಾಯ. ಜನಪ್ರತಿನಿಧಿಗಳು ಹಠಬಿಟ್ಟು ಪಾರಂಪಾರಿಕ ಸ್ಟಡ್ ಫಾರ್ಮ್ ರಕ್ಷಿಸಲು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹುಚ್ಚಮಾಸ್ತಿ ಗೌಡ ಸರ್ಕಲ್ ಬಳಿ ಸಮಾವೇಶಗೊಂಡಿದ್ದ ಬೈಕ್‌ರೈಡರ್‌ಗಳನ್ನು ಉದ್ದೇಶಿಸಿ ವಿಜಯ್ ನಿಶಾಂತ್ ಹೇಳಿದರು.

ಸ್ಟಡ್ ಫಾರ್ಮ್ಗೆ ಭೇಟಿ:

30 ಬೈಕ್, 10 ಕಾರುಗಳಲ್ಲಿ ನೂರುಕ್ಕು ಹೆಚ್ಚು ಮಂದಿ ಸ್ಟಡ್ ಫಾರ್ಮ್ ಉಳಿಸಿ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಅಂಗವಿಕಲೆ ಪದ್ಮಪ್ರಿಯಾ ಜತೆಯಲ್ಲಿ ಎಲ್ಲಾ ಬೈಕ್‌ರೈಡರ್‌ಗಳು ಕುಣಿಗಲ್ ಸ್ಟಡ್ ಫಾರ್ಮ್ಗೆ ಭೇಟಿ ನೀಡಿ ವಿಶಾಲವಾದ ಫಾರ್ಮ್, ಕುದುರುಗಳೆ ಕಂಡು ಸಂಭ್ರಮಿಸಿದರು. ಮಕ್ಕಳು ಸಹ ಸೇವ್ ಸ್ಟಡ್ ಫಾರ್ಮ್ ಘೋಷಣೆ ಕೂಗಿ ಪ್ರಭಾವಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಐತಿಹಾಸಿಕ ಕುಣಿಗಲ್ ಕುದುರೆ ಫಾರ್ಮ್ ನಲ್ಲಿ ನಿರ್ಮಾಣ ಮಾಡಬೇಡಿ. 170ಕ್ಕು ಹೆಚ್ಚು ಕಾರ್ಮಿಕ ಕುಟುಂಬಗಳು ಇಲ್ಲಿವೆ. ಅವರನ್ನು ಬೀದಿಗೆ ತಳ್ಳಬೇಡಿ. ನಮ್ಮ ಹೋರಾಟ ಇನ್ನೂ ಆರಂಭ. ಇದು ದೇಶ, ಅಂತಾರಾಷ್ಟ್ರೀಯ ಮಟ್ಟಕ್ಕೂ ಮುಟ್ಟಲಿದೆ. ಆ ರೀತಿ ಸೇವ್ ಸ್ಟಡ್ ಫಾರ್ಮ್ ಅಭಿಯಾನ ಸಾಗಲಿದೆ.ವಿಜಯ್‌ ಶಾಂತ್ವೃಕ್ಷ ವೈದ್ಯ
ಹೆರಿಟೇಜ್ ಕುಣಿಗಲ್ ಸ್ಟಡ್‌ಫಾರ್ಮ್ ನಾಡಿನ ಅಸ್ಮಿತೆ. ಅಭಿವೃದ್ಧಿ ನೆಪದಲ್ಲಿ ಇದನ್ನು ನಾಶ ಮಾಡಲು ಹೊರಟರೆ ಯಾರೂ ಸಹಿಸುವುದಿಲ್ಲ. ಅರಣ್ಯ ಸಂರಕ್ಷಣೆ ಸೇರಿದಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ನಾವು ಕುಣಿಗಲ್ ಕುದುರೆ ಫಾರ್ಮ್ ಉಳಿಸುವ ಅಭಿಯಾನದಲ್ಲಿ ಭಾಗಿಯಾಗಿದ್ದು ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ.|ಆರ್. ಗಿರೀಶ್ ಕುಮಾರ್ಬೈಕ್ ರೈಡರ್ ಬೆಂಗಳೂರು ಆರ್‌ಡಿ350 ಕ್ಲಬ್