ಜಿಲ್ಲೆ

ಆಲಿಂಜದಲ್ಲಿ ತುಳುಲಿಪಿ ದಿನಾಚರಣೆ

Avinash R

ಬದಿಯಡ್ಕ: ಆಲಿಂಜ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳುಲಿಪಿ ದಿನಾಚರಣೆ ನಡೆಯಿತು. ತುಳುಲಿಪಿ ಬ್ರಹ್ಮ ಡಾ.ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನವನ್ನು ತುಳು ಲಿಪಿ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ರೈ ಗಾಡಿಗುಡ್ಡೆ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಭಂಡಾರಿ ಬೆಳಿಂಜ ಹೊಸಮನೆ, ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕುಂಜತ್ತಾಯ ಮಲ್ಲಾರ, ಕೋಶಾಧಿಕಾರಿ ಹರ್ಷಕುಮಾರ್ ರೈ ಮೇಗಿನ ಬೆಳಿಂಜ, ಜಗನ್ನಾಥ ಶೆಟ್ಟಿ, ಹರೀಶ ನಾಯ್ಕ ಮಾತನಾಡಿದರು. ಅಮೃತರಾಜ ರೈ ಮರತ್ತಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷರಾಜ ಭಂಡಾರಿ ಬೆಳಿಂಜ ಹೊಸಮನೆ ಸ್ವಾಗತಿಸಿ, ಕೃಷ್ಣ ಡಿ.ಬೆಳಿಂಜ ವಂದಿಸಿದರು.