ಜಿಲ್ಲೆ

ಮಾ.19ಕ್ಕೆ ಕುರಲ್​ ತುಳು ಸಾಹಿತ್ಯ ಪರ್ಬ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಣಿಪಾಲ ಸಂಗಮ ಕಲಾವಿದೆರ್​ ಆಶ್ರಯದಲ್ಲಿ ಮಾ.19 ರಂದು ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ "ಕುರಲ್​'- ತುಳು ಸಾಹಿತ್ಯ ಸಾಂಸತಿಕ ಪರ್ಬ ಆಯೋಜಿಸಲಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂತೋಷ್​ ಶೆಟ್ಟಿ ಹಿರಿಯಡ್ಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಗ್ಗೆ 9.45ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್​ ಗಟ್ಟಿ ಕಾಪಿಕಾಡ್​ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕಾಡೆಮಿ ರಿಜಿಸ್ಟ್ರಾರ್​ ಪೂರ್ಣಿಮಾ ಭಾಗವಹಿಸಲಿದ್ದಾರೆ. ಬಳಿಕ ನವೋದಯ ಸಾಂಸತಿಕ ಕಲಾತಂಡ ಪಾಂಬೂರು ಇವರಿಂದ ಡೋಲು ಪ್ರಾತ್ಯಕ್ಷಿಕೆ ನಡೆಯಲಿದೆ. ಸಾಯಂಕಾಲ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಲೇಖಕ ಪ್ರೊ. ಮುರಳೀಧರ ಉಪಾಧ್ಯಾಯ ಮತ್ತು ಉದ್ಯಮಿ ಹರಿಪ್ರಸಾದ್​ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಗಮ ಕಲಾವಿದೆರ್​ ಸಂಸ್ಥೆಯ ಶ್ರೇಯಸ್​ ಕೋಟ್ಯಾನ್​, ರಾಘವೇಂದ್ರ ನಾಯ್ಕ್​, ಆನಂದ್​ ನಾಯ್ಕ್​, ವೈಷ್ಣವಿ ಭಂಡಾರ್ಕರ್​ ಉಪಸ್ಥಿತರಿದ್ದರು.