ಜಿಲ್ಲೆ

ತುಳು ನಾಟಕ ಪರ್ಬ ಸಮಾರೋಪ

Dakshina Kannada

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಾಪ್ತಿ ತೆಲಿಕೆದ ಕಲಾವಿದರು ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಸಹಯೋಗದಲ್ಲಿ ಅಕಾಡೆಮಿ ಸಿರಿ ಚಾವಡಿಯಲ್ಲಿ ನಡೆದ ನಾಟಕ ಪರ್ಬದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಿತ್ತರಂಜನ್ ಶೆಟ್ಟಿ, ತುಳು ರಂಗನಟಿ ಸರೋಜಿನಿ ಶೆಟ್ಟಿ, ನಟ ಚೇತನ್ ರೈ ಮಾಣಿ, ಗೆಜ್ಜೆಗಿರಿ ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ಗುತ್ತಿಗೆದಾರ ನಿತೇಶ್ ಪೂಜಾರಿ ಉಡುಪಿ, ನಿರ್ದೇಶಕ ರಂಜಿತ್ ಸುವರ್ಣ, ತುಳುವ ಬೊಳ್ಳಿ ಪ್ರತಿಷ್ಠಾನ ಅಧ್ಯಕ್ಷ ಯಾದವ ಕೋಟ್ಯಾನ್, ಫಾ.ರೆವರೆಂಡ್ ವಿನ್ಸೆಂಟ್, ಉದ್ಯಮಿ ಪ್ರಕಾಶ್ ಪ್ರಭು, ನಿರ್ದೇಶಕ ರಾಜ್ ಸುವರ್ಣ ಅತಿಥಿಗಳಾಗಿದ್ದರು. ಇದೇ ಸಂದರ್ಭ ಹಿರಿಯ ನಾಟಕಕಾರ ದಿ.ಶಿವಾನಂದ ಕರ್ಕೇರ ಸಂಸ್ಮರಣೆ ನಡೆಯಿತು.

ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ., ಸದಸ್ಯರಾದ ನಿಟ್ಟೆ ಶಶಿಧರ್ ಶೆಟ್ಟಿ, ನಾಗೇಶ್ ಕುಲಾಲ್, ಕಡಬ ದಿನೇಶ್ ರೈ, ಚೇತಕ್ ಪೂಜಾರಿ, ನರೇಂದ್ರ ಕೆರೆಕಾಡ್, ಸಂತೋಷ್ ಪೂಜಾರಿ, ರವಿ ಪಿ.ಎಂ ಮಡಿಕೇರಿ ಉಪಸ್ಥಿತರಿದ್ದರು.

ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಶಾಂತ್ ಸಿ.ಕೆ ಸಾರಥ್ಯ, ನಿರ್ದೇಶನದಲ್ಲಿ ‘ಸತ್ಯೊದ ಬಿರುವೆರ್’ ತುಳು ನಾಟಕ ಪ್ರದರ್ಶನಗೊಂಡಿತು.