ಜಿಲ್ಲೆ

ತುಳು ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Mangaluru - Hariprasad Rai



ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2024 ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಲೇಖಕರು ಹಾಗೂ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. 2024ರ ಜ.1ರಿಂದ ಡಿ.31ರ ಅವಧಿಯಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಪುಸ್ತಕ ಪ್ರಶಸ್ತಿಗೆ ಪರಿಗಣಿಸಲಾಗುವುದು.
ತುಳು ಕವನ ಸಂಕಲನ, ತುಳು ಕಥಾ ಸಂಕಲನ, ತುಳು ಕಾದಂಬರಿ,ತುಳು ಕಾವ್ಯ, ತುಳು ನಾಟಕ, ತುಳುವಿನ ಬಗ್ಗೆ ಅಧ್ಯಯನ ಗ್ರಂಥ ಹಾಗೂ ತುಳುವಿನಿಂದ ಇತರ ಭಾಷೆಗೆ , ಇತರ ಭಾಷೆಯಿಂದ ತುಳುವಿಗೆ ಭಾಷಾಂತರಿತ ಕೃತಿಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿದೆ. ಈ ಪ್ರಕಾರಗಳಲ್ಲಿ ಅಕಾಡೆಮಿಯು ಹೆಚ್ಚು ಸಂಖ್ಯೆಯಲ್ಲಿಸ್ವೀಕರಿಸುವ ಪುಸ್ತಕಗಳ 3 ಪ್ರಕಾರಗಳನ್ನು ಮಾತ್ರ ಪುಸ್ತಕ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಪುಸ್ತಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ತುಳು ಅಕಾಡೆಮಿ ಪುಸ್ತಕ ಪ್ರಶಸ್ತಿಗೆ ಎಂದು ಬರೆದು,
ರಿಜಿಸ್ಟಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನ, ಪೋಸ್ಟ್ ಅಶೋಕನಗರ, ಉರ್ವಸ್ಟೋರ್, ಮಂಗಳೂರು -
575 006 ಈ ವಿಳಾಸಕ್ಕೆ ಜ.1ರೊಳಗಾಗಿ ಸಲ್ಲಿಸುವಂತೆ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.