ಜಿಲ್ಲೆ

ಸಾಹಿತ್ಯ, ಸಾಂಸ್ಕೃತಿಕವಾಗಿ ತುಳು ಭಾಷೆ ಶ್ರೀಮಂತ - ತುಳುಕೂಟದ ಆಟಿ ಕಾರ್ಯಕ್ರಮದಲ್ಲಿ ಬಿ.ವಿ.ಸೂರ್ಯನಾರಾಯಣ ಅಭಿಪ್ರಾಯ

Mangaluru - Nishantha Narayana

ಪುತ್ತೂರು: ತುಳು ಭಾಷೆ ಮತ್ತು ಬದುಕಿಗೆ ಬೇಸಾಯದ ಹಿನ್ನೆಲೆಯಿದೆ. ನಮ್ಮ ದೈನಂದಿನ ಬದುಕಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತುಳು ಭಾಷೆಯನ್ನು ಅಭಿಮಾನ ಮತ್ತು ಆಸಕ್ತಿಯಿಂದ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಹೇಳಿದರು.

ಪುತ್ತೂರು ತುಳುಕೂಟ, ರೋಟರಿ ಪುತ್ತೂರು ಸೆಂಟ್ರಲ್ ಆಯೋಜಿಸಿದ ಪಿರಾಕ್‌ದ ಆಟಿದ ನೆಂಪು(ಗತಕಾಲದ ಆಟಿ ತಿಂಗಳ ನೆನಪು) ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಸೆಂಟ್ರಲ್ ಅಧ್ಯಕ್ಷ ಬಿ.ಚಂದ್ರಹಾಸ ರೈ ಅಧ್ಯಕ್ಷತೆ ವಹಿಸಿದ್ದರು. ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಅಧ್ಯಕ್ಷ ಎ.ಜೆ.ರೈ, ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ, ರೋಟರಿ ಸೆಂಟ್ರಲ್ ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಮುಕ್ವೆ, ರೋಟರಿ ಕಾರ್ಯದರ್ಶಿ ಎ.ಎಲ್.ಜಯಪ್ರಕಾಶ್ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆ

ಪುರುಷರಿಗೆ ತುಳುವರ ಮುಂಡಾಸ್ ಕಟ್ಟುವ ಸ್ಪರ್ಧೆ ಮತ್ತು ಮಹಿಳೆಯರಿಗೆ ಸೀರೆಯ ನೆರಿಗೆ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಿಂದೆ ಆಟಿ ತಿಂಗಳ ಕಷ್ಟದ ದಿನಗಳಲ್ಲಿ ತಯಾರಿಸುತ್ತಿದ್ದ ಸ್ಥಳೀಯ ಔಷಧಯುಕ್ತ ಕಾಡು ಗಿಡ ಸೊಪ್ಪುಗಳ ಖಾದ್ಯ ಸೇರಿದಂತೆ ೪೫ ಬಗೆಯ ತಿನಿಸು, ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು.