ಜಿಲ್ಲೆ

ನವನಗರ ದೇವಸ್ಥಾನ ವಾರ್ಷಿಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ಗಂಗಾಧರನಗರ ಬಡಾವಣೆಯ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ತುಳಜಾ ಭವಾನಿ ದೇವಸ್ಥಾನದ 6ನೇ ವಾರ್ಷಿಕೋತ್ಸವ ಜೂನ್ 15ರಿಂದ ಎರಡು ದಿನ ಏರ್ಪಡಿಸಲಾಗಿದೆ.

ಶನಿವಾರ ದೇವಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಶ್ರೀಗಣ ಹೋಮ, ಶ್ರೀ ನವಗ್ರಹ ಹೋಮ, ಪೂರ್ಣಾಹುತಿ ಹಾಗೂ ದೇವಿಯ ಮಹಾಮಂಗಳಾರತಿ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಜೂನ್ 16ರಂದು ಬೆಳಗ್ಗೆ 8ಕ್ಕೆ ದುರ್ಗಾ ಹೋಮ ದೇವಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಪೂರ್ಣಾಹುತಿ, ನೈವೇದ್ಯ ಹಾಗೂ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸಮಾಜದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ, ಮಹಾಪ್ರಸಾದ, ಸಂಜೆ 6ಕ್ಕೆ ಭಕ್ತೀಗಿತೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.