ಕಂಪ್ಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ಆಯೋಜಿಸಲಾಗಿತ್ತು. ಮಕ್ಕಳಿಗೆ ಓದುವಿಕೆ, ಅರ್ಥೈಸಿಕೊಳ್ಳುವಿಕೆ, ಉತ್ತರಿಸುವ ಕೌಶಲ ತಿಳಿಸಲಾಯಿತು ಎಂದು ಟ್ರಸ್ಟ್ ತಾಲೂಕು ಸಮನ್ವಯಾಧಿಕಾರಿ ರೇಖಾ ಹೇಳಿದರು.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಮಕ್ಕಳ ಟ್ಯೂಷನ್ ಸಮಾರೋಪ
ತಾಲೂಕಿನ ಹೊಸ ನೆಲ್ಲೂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಅಡಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಟ್ಯೂಷನ್ ಕ್ಲಾಸ್ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೇಲ್ವಿಚಾರಕ ಮಂಜುನಾಥ, ಶಿಕ್ಷಕರಾದ ಟಿ.ಪರಶುರಾಮ, ಬಿ.ಹನುಮಂತರೆಡ್ಡಿ, ಶಿವನೇಗೌಡ ರಾಮಪ್ಪ, ಸುಖರಾಜ, ಶಿವನಾಗಪ್ಪ, ಕೆ.ಎಂ.ಸರಳಾ, ಗಂಗಪ್ಪ, ಪ್ರಿಯಾಂಕಾ, ಒಕ್ಕೂಟದ ಅಧ್ಯಕ್ಷೆ ಸರೋಜಾ, ಸೇವಾ ಪ್ರತಿನಿಧಿ ರೇಣುಕಾ ಇತರರಿದ್ದರು.