ಜಿಲ್ಲೆ

ಸಿಎಚ್‌ಸಿ ನರಸಿಂಹರಾಜುಗೆ ರಾಷ್ಟ್ರಪತಿ ಪದಕ

ತುಮಕೂರು: ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ ಕಾನ್ ಸ್ಟೇಬಲ್ ಎಸ್.ಎನ್.ನರಸಿಂಹರಾಜು ಅವರಿಗೆ ಗಣರಾಜ್ಯೋತ್ಸವ ಅಂಗವಾಗಿ 2024ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಪದಕ ಲಭಿಸಿದೆ.

2011-2022ನೇ ಸಾಲಿನವರೆಗೂ ಜಿಲ್ಲೆಯಲ್ಲಿ ವರದಿಯಾದ ಸೂಕ್ಷ್ಮ ಹಾಗೂ ಗಂಭೀರ ಅಪರಾಧ ಪ್ರಕರಣಗಳನ್ನು ತಾಂತ್ರಿಕ ನೈಪುಣ್ಯತೆಯ ಮೂಲಕ ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಉತ್ತಮ ಸಾಧನೆ ತೋರಿದ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.