ಜಿಲ್ಲೆ

6 ಪಂಚಾಯಿತಿಗೆ ಕ್ಷಯಮುಕ್ತ ಗ್ರಾ.ಪಂ.ಪ್ರಶಸ್ತಿ

ಯಳಂದೂರು: ತಾಲೂಕಿನ 6 ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಕೊಡ ಮಾಡುವ ಕ್ಷಯರೋಗಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿದೆ.

2023ನೇ ಸಾಲಿನಲ್ಲಿ ದುಗ್ಗಹಟ್ಟಿ ಹಾಗೂ ಗುಂಬಳ್ಳಿ ಗ್ರಾಮ ಪಂಚಾಯಿತಿ, 2024ನೇ ಸಾಲಿನಲ್ಲಿ ಅಂಬಳೆ, ಬಿಳಿಗಿರಿರಂಗನಬೆಟ್ಟ, ಯರಗಂಬಳ್ಳಿ ಹಾಗೂ ಮದ್ದೂರು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.

ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಎನ್‌ಟಿಇಪಿ ವತಿಯಿಂದ ಹಮ್ಮಿಕೊಂಡಿದ್ದ ಕ್ಷಯಮುಕ್ತ ಭಾರತ ಅಭಿಯಾನದಡಿ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಸಮಾರಂಭದಲ್ಲಿ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ ಪ್ರಶಸ್ತಿ ಪತ್ರ ನೀಡಿದರು.