ಜಯವಾಣಿ ಸುದ್ದಿಜಾಲ ತೂಬಗೆರೆ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ದೇಶದ ಗೌರವ ಕಾಪಾಡಬೇಕು. ಕಲ್ಮಶ
ಇಲ್ಲದಿರುವ ಸಂಘಟನೆಯ ಜಾಗದಲ್ಲಿದ್ದುಕೊಂಡು ಪ್ರಾಮಾಣಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಹಾಡೋನಹಳ್ಳಿಯಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಎಲ್ಲಿ ಅನ್ಯಾಯ ನಡೆಯುತ್ತದೋ ಅಲ್ಲಿ ಸಂಘಟನೆ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ.
ಯಾರು ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೋ ಅಂಥವರ ಧ್ವನಿಯಡಗಿಸಿ ಸರಿದಾರಿಗೆ ತರಲಾಗುತ್ತಿದೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎನ್ನುವ ನಿಟ್ಟಿನಲ್ಲಿ ಹಾಡೋನಹಳ್ಳಿಯಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಭೂಮಿ ಖರೀದಿಸಿ ಅಮ್ಮನ ನೆರಳು ಎಂಬ ನಿರಾಶ್ರೀತ ಸೇವಾ ಟ್ರಸ್ಟ್ ಆರಂಭಿಸಲಾಗುವುದು. ವೇದಿಕೆ ಮತ್ತು ಟ್ರಸ್ಟ್‌ನಲ್ಲಿ ಯಾವುದೇ ರಾಜಕೀಯ ಮುಖವಿಲ್ಲ. ಇದು ಸಮಾಜಸೇವೆ ಮುಡಿಪು ಎಂದರು.