ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ&ಮಂಚೇನಹಳ್ಳಿ ಕಲ್ಪಿಸುವ ರಸ್ತೆಯಲ್ಲಿ ಡಾಂಬರ ಕಿತ್ತು ಬಂದು ಗುಂಡಿಗಳಲ್ಲಿ ಮಳೆ ನೀರು ನಿಂತಿರುವುದು. 
ಜಿಲ್ಲೆ

ತೂಬಗೆರೆ&ಮಂಚೇನಹಳ್ಳಿ ರಸ್ತೆ ಗುಂಡಿಮಯ

ತೂಬಗೆರೆ : ತೂಬಗೆರೆ&ಮಂಚೇನಹಳ್ಳಿ ಮಾರ್ಗದ ರಸ್ತೆ ಉದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಸಾಗುವ ಪರಿಸ್ಥಿತಿ ಎದುರಾಗಿದೆ.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಮುಖ್ಯರಸ್ತೆಯಿಂದ ದೊಡ್ಡಮುದ್ದನಹಳ್ಳಿ, ತುರುವನಹಳ್ಳಿ, ಚಿಕ್ಕ ಮುದ್ದೇನಹಳ್ಳಿ, ದೊಡ್ಡ ಮುದ್ದೇನಹಳ್ಳಿ, ಕಲ್ಲುಕೊಟೆ, ಮುಕ್ಕಡಿ ಟ್ಟ ಸೇರಿ ಇನ್ನು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಸುಮಾರು 8 ಕಿ.ಮೀ ಉದ್ದಕ್ಕೂ ರಸ್ತೆ ಕಿತ್ತು ಹೋಗಿದೆ.

ವಾಹನ ಸವಾರರು ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಆಟೋಗಳಲ್ಲಿ ಸಂಚರಿಸುವ ಪ್ರಯಾಣಿಕರು ಯಾವಾಗ ಆಟೋ ಪಲ್ಟಿಯಾಗುವುದೋ ಎಂಬ ಆತಂಕದಲ್ಲಿಯೇ ಪ್ರಯಾಣಿಸುವಂತಾಗಿದೆ. ಪ್ರತಿದಿನ ಶಾಲಾ&ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಪಾಡು ಹೇಳುತೀರದಂತಾಗಿದೆ.

ಚುನಾವಣೆ ಸಂದರ್ಭದಲ್ಲಿ ಮನೆಮನೆ ಬಾಗಿಲಿಗೆ ಬಂದು ಮತ ಭಿಕ್ಷೇ ಕೇಳುವವರು ಚುನಾವಣೆ ಗೆಲುವಿನ ಬಳಿಕ ಈ ಕಡೆ ಸುಳಿಯುವುದೇ ಇಲ್ಲ. ಚುನಾವಣೆ ಪ್ರಚಾರದ ವೇಳೆ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಭರವಸೆಯೂ ಮಹಾಪೂರಕವನ್ನೇ ಹರಿಸುತ್ತಾರೆ, ನಂತರದಲ್ಲಿ ಸಂಪರ್ಕಕ್ಕೆ ಸಿಗುವುದೇ ಇಲ್ಲ. ಈ ಗ್ರಾಮಗಳಿಗೆ ಬಸ್​ ಬೇಕಾದರೂ ಗಲಾಟೆ ಮಾಡಬೇಕು, ಈ ರಸ್ತೆಯಲ್ಲಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗೆ ಗರ್ಭಿಣಿಯರು ತೆರಳಲು ಎರಡು ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ, ರಾಜಕೀಯ ವ್ಯಕ್ತಿಗಳು ಗ್ರಾಮಗಳಿಗೆ ತೆರಳಿ ಇಲ್ಲಸಲ್ಲದ ಭರವಸೆ ನೀಡಿ ಹೋಗುತ್ತಾರೆ, ಏನಾದರೂ ಸರಿ ನಮಗೆ ರಸ್ತೆ ಆಗಲೇಬೇಕು ಎನ್ನುತ್ತಾರೆ ಕಲ್ಲುಕೊಟೆಯ ಜಗದೀಶ್​ (ಮೇಷ್ಟ್ರು).

ಈ ರಸ್ತೆಗೆ ಡಾಂಬರೀಕರಣ ಮಾಡಿ 20 ವರ್ಷಗಳು ಕಳೆದಿದೆ. ಯಾವೊಬ್ಬ ಶಾಸಕರು ಇತ್ತ ಗಮನ ಹರಿಸಿಲ್ಲ. ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿದೆ, ಈ ರಸ್ತೆ ವೆಂಕಟರಮಯ್ಯ ಶಾಸಕರಾಗಿದ್ದ ಡಾಂಬರೀಕರಣ ಆಗಿದ್ದು, ಬಿಟ್ಟರೆ 3 ಶಾಸಕರು ಬಂದರೂ ಡಾಂಬರೀಕರಣ ಮಾಡಿಲ್ಲ. | ನರಸಿಂಹಮೂರ್ತಿ ಚಿಕ್ಕಮುದ್ದೇನಹಳ್ಳಿ ಸುಮಾರು ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು ಓಡಾಡಲು ಆಗುತ್ತಿಲ್ಲ, ರೈತರು ತರಕಾರಿಗಳನ್ನು ಸರಿಯಾದ ಸಮಯಕ್ಕೆ ಸಾಗಿಸಲು ಆಗುತ್ತಿಲ್ಲ. ದೊಡ್ಡ ದೊಡ್ಡ ಗುಂಡಿಗಳು ಬಿದ್ದು, ರೈತರು ಇಡಿ ಶಾಪ ಹಾಕುತ್ತಿದ್ದಾರೆ. ಎಷ್ಟೋ ಬಾರಿ ಎಲ್ಲ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. | ಅಂಬರೀಶ ಮುದ್ದೇನಹಳ್ಳಿ ರೈತ ತೂಬಗೆರೆ ಸರ್ಕಾರಿ ಪ್ರೌಢ ಶಾಲೆಗೆ ಹೋಗಲು ಒಂದು ಗಂಟೆ ಬೇಕು. ಶಾಲೆಗೆ ತಡವಾಗಿ ಹೋದರೆ ಶಿಕ್ಷಕರು ಬೈಯುತ್ತಾರೆ, ನಮಗೆ ಇರೋದು ಒಂದೇ ಬಸ್​. ಅದೂ ಯಾವಾಗ ಹೋಗುತ್ತದೆ ಅನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಗುಂಡಿಗಳಿಂದ ತುಂಬಿದ ಈ ರಸ್ತೆ ಸರಿಪಡಿಸಬೇಕು. | ಮಹೇಶ್​ ಮುದ್ದೇನಹಳ್ಳಿ ವಿದ್ಯಾರ್ಥಿ