ಜಿಲ್ಲೆ

ಪೊಲೀಸ್ ಬಂದೋಬಸ್ತ್‌ನಲ್ಲಿ ಟಿಎಸ್‌ಎಸ್ ಸಭೆ

ಶಿರಸಿ: ನಗರದ ಟಿಎಸ್‌ಎಸ್ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಮಂಗಳವಾರ ನಡೆಸಲಾಯಿತು.

ಕಳೆದ ಕೆಲ ತಿಂಗಳಿನಿಂದ ಟಿಎಸ್‌ಎಸ್ ಆಡಳಿತ ಕುರಿತಂತೆ ಗೊಂದಲಗಳು ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸಂಘದ ಪ್ರಗತಿ, ಕಳೆದ ವರ್ಷದ ಲಾಭ-ಹಾನಿಯ ಬಗ್ಗೆ ವಿವರಿಸಿದರು. ಬಳಿಕ ಎಲ್ಲ ಷೇರು ಸದಸ್ಯರಿಗೆ ಈ ಹಿಂದೆಯೇ ಕಳಿಸಲಾಗಿದ್ದ 2018-19 ರಿಂದ 22-23 ರವರೆಗಿನ ಐದು ವರ್ಷದ ಆಡಿಟ್ ವರದಿಯನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಈ ಹಿಂದಿನ ಆಡಳಿತ ಮಂಡಳಿಯ ಪ್ರಮುಖರು, ಪ್ರಧಾನ ವ್ಯವಸ್ಥಾಪಕರು ಮಾಡಿದ್ದಾರೆ ಎನ್ನಲಾದ ಲೋಪ ದೋಷಗಳ ಕುರಿತು ಸಭೆಯಲ್ಲಿ ಅಭಿಪ್ರಾಯ ಕೇಳಲಾಯಿತು. ಸಂಘಕ್ಕಾದ ನಷ್ಟವನ್ನು ಮರುಪಾವತಿ ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಲು ತೀರ್ಮಾನಿಸಲಾಯಿತು ಎಂದು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ತಿಳಿಸಿದ್ದಾರೆ.