ಶಿರಸಿ: ಟಿಎಸ್ ಎಸ್ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಆಡಳಿತ ಮಂಡಳಿಯ ಬಣ ಸೋಲು ಕಂಡಿದೆ. ಬಹು ವರ್ಷಗಳ ಬಳಿಕ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುಂಡಗನಮನೆ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬಣದ 14 ಸದಸ್ಯರು ಜಯಗಳಿಸಿದ್ದರೆ. ಕಾರ್ಯಾಧ್ಯಕ್ಷರಾಗಿದ್ದ ರಾಮಕೃಷ್ಷ ಹೆಗಡೆ ಕಡವೆ ಅವರು ಕೇವಲ 4 ಮತಗಳಿಂದ ಜಯಗಳಿಸಿದ್ದಾರೆ. ಹಾಹಾಗಿ ಗೋಪಾಲಕೃಷ್ಣ ವೈದ್ಯ ಟಿಎಸ್ ಎಸ್ ಅಧ್ಯಕ್ಷರಾಗುವುದು ಖಚಿತವಾಗಿದೆ.
ವಿಜೇತರು:
ಗೋಪಾಲಕೃಷ್ಣ ವೈದ್ಯ- 2072 ಮತಹಳು, ಗಣಪತಿ ಜೋಶಿ-2008 ಮತಗಳು,ರವೀಂದ್ರ ಹೆಗಡೆ ಹಿರೇಕೈ-1855,ವೀರೇಂದ್ರ ಗೌಡರ್-1822 ಮತಗಳು, ಎಂ.ಎನ್.ಭಟ್-1820, ಅಶೋಕ ಹೆಗಡೆ-1813, ದತ್ತಗುರು ಹೆಗಡೆ ಕಡವೆ-1765, ಪುರುಷೋತ್ತಮ ಹೆಗಡೆ-1734, ವಸಂತ ಹೆಗಡೆ-1593, ರವಿ ಹಳದೋಟ-1705, ಕೃಷ್ಣ ಹೆಗಡೆ-1683, ದೇವೇಂದ್ರ ನಾಯ್ಕ-1686, ನಿರ್ಮಲಾ ಭಟ್- 1885 , ವಸುಮತಿ ಭಟ್ - 1745, ರಾಮಕೃಷ್ಣ ಹೆಗಡೆ-1518 ಮತ ಪಡೆದು ಆಯ್ಕೆಯಾದರು.
ರಾತ್ರಿ ಜಯಗಳಿಸಿದ ಬಳಿಕ ಮಾತನಾಡಿದ ಗೋಪಾಲಕೃಷ್ಣ ವೈದ್ಯ, ಚುನಾವಣೆಯ ಹೊರತಾಗಿ ಇಲ್ಲಿ ನಡೆದ ವ್ಯವಹಾರವನ್ನು ಎಲ್ಲೂ ಬಹಿರಂಗವಾಗಿ ಹೇಳಿಲ್ಲ.ಸಂಸ್ಥೆಯ ಮಹಾ ಸದಸ್ಯರಿಗೆ ಎಲ್ಲ ತಿಳಿದಿದೆ. ಅವರು ನಮ್ಮ ಬಣ ಬೆಂಬಲಿಸಿದ್ದಾರೆ ಎಂದರು.