ಮೈಸೂರು: ಟಿ.ಎಸ್.ಸುಬ್ಬಣ್ಣ ಅವರು ತಮ್ಮ ಜೀವವನ್ನು ಬೇರೆಂುವರ ಸೇವೆಗಾಗಿಂೆುೀ ಮುಡುಪಾಗಿಟ್ಟಿದ್ದ ಮಹಾನ್ ವ್ಯಕ್ತಿ ಎಂದು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸರ್ವಮಂಗಳಬಾಯಿ ತಿಳಿಸಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಂುಲ್ಲಿ ಶುಕ್ರವಾರ ನಡೆದ ಟಿ.ಎಸ್.ಸುಬ್ಬಣ್ಣ ಅವರ 33ನೇ ಸಂಸ್ಮರಣೆಂುಲ್ಲಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಿಕ್ಷಣ ಸಾವಾನ್ಯರಿಂದ ದೂರ ಉಳಿದಿದ್ದ ಕಾಲದಲ್ಲಿ ಸುಬ್ಬಣ್ಣನವರು ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 11 ಶಾಲೆಗಳನ್ನು ಮತ್ತು ಬಾಲಕರು, ಬಾಲಕಿಯರಿಗೆ ಪ್ರತ್ಯೇಕವಾಗಿ 2 ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಆಶ್ರಂು ನೀಡಿ ಶಿಕ್ಷಣ ನೀಡುತ್ತಿದ್ದರು ಎಂದರು.
ಇದೇ ವೇಳೆ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿಂುಲ್ಲಿ ಹೆಚ್ಚು ಅಂಕ ಗಳಿಸಿದ ಶಾಲೆಂು 11 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹೆಚ್ಚು ಅಂಕ ಗಳಿಸಲು ಕಾರಣರಾದ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.
ವಿಜಂುನಗರ ರೋಟರಿ ಕ್ಲಬ್‌ನ ಅಧ್ಯಕ್ಷ ಆರ್.ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಜಿ ಶಾಸಕ ಹಾಗೂ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸಿ.ಎಸ್.ನಿರಂಜನ್ ಕುವಾರ್ ಅಧ್ಯಕ್ಷತೆ ವಹಿಸಿದ್ದರು. ನಗರ ಪಾಲಿಕೆ ಮಾಜಿ ಸದಸ್ಯ ಎಂ.ಸುನೀಲ್, ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ.ಜಿ.ಸಿ.ರಾಜಣ್ಣ, ಖಜಾಂಚಿ ಡಾ.ಪಿ.ಎನ್.ಹರೀಶ್, ಧರ್ಮದರ್ಶಿಗಳಾದ ಪ್ರೊ.ಎಚ್.ಎಂ.ವಸಂತಮ್ಮ, ಡಾ.ಬಿ.ನಾಗರಾಜಮೂರ್ತಿ, ಡಿ.ನಾಗುನಾಯ್ಕ, ಬಿ.ಸುವರ್ಣದೇವಿ, ಟಿ.ಎಸ್.ಸುಬ್ಬಣ್ಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಇತರರು ಹಾಜರಿದ್ದರು.