ಜಿಲ್ಲೆ

ಚರಸ್ ಮಾರಾಟಕ್ಕೆ ಯತ್ನ- ಸೆರೆ

ವೀರೇಶ ಸೌದ್ರಿ

ಗೋಕರ್ಣ: ಇಲ್ಲಿನ ಚೌಡಗೆರೆ ಹೆಸ್ಕಾಂ ಗ್ರಿಡ್ ಬಳಿ ಚರಸ್ ಮಾರಾಟದ ತಯಾರಿಯಲ್ಲಿದ್ದ ವ್ಯಕ್ತಿಯೊಬ್ಬನನ್ನು ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿ 975 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ರಾಜುಸಿಂಗ್ ಮಾನ್‌ಸಿಂಗ್ ಬಂಧಿತ. ಈತ ಗೋವಾದ ಹೋಟೆಲ್‌ನಲ್ಲಿ ಅಡುಗೆಯವನಾಗಿ ಕೆಲಸದಲ್ಲಿದ್ದ ಎನ್ನಲಾಗಿದೆ. ವಶಕ್ಕೆ ಪಡೆದ ಚರಸ್ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದಾಳಿಯಲ್ಲಿ ಪಿಐ ವಸಂತ ಆಚಾರ್, ಪಿಎಸ್‌ಐ ಖಾದರ್ ಬಾಷಾ, ಎಎಸ್‌ಐಗಳಾದ ನಿರಂಜನ ನಾಯಕ, ಅರವಿಂದ ಶೆಟ್ಟಿ, ಇತರರು ಇದ್ದರು. ಪ್ರಕರಣ ದಾಖಲಾಗಿದೆ.