ರಾಯಚೂರಿನ ಹಾಷ್ಮಿಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದಿಂದ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ಜಿಲ್ಲಾ ದೈಹಿಕ ಶಿಕ್ಷಣಾಕಾರಿ ಪರಶುರಾಮ್ ಹುಜರತಿ ಉದ್ಘಾಟಿಸಿದರು. ಸೇವಾದಳ ಜಿಲ್ಲಾಧ್ಯಕ್ಷ ಬಸವರಾಜ ಗೌರಂಪೇಟೆ, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ, ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿನಮಗೇರಿ, ತಾಲೂಕು ದೈಹಿಕ ಶಿಕ್ಷಣಾಕಾರಿ ಎನ್.ಎಚ್.ಬಾಷಾ, ಸೇವಾದಳ ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪ ಕ್ಯಾದಿಗ್ಗೇರಾ, ಪದಾಕಾರಿಗಳಾದ ಮಲ್ಲಿಕಾರ್ಜುನ ರೆಡ್ಡಿ, ದಾನಮ್ಮ ಸುಭಾಷಚಂದ್ರ ಇದ್ದರು. 
ಜಿಲ್ಲೆ

ಮಕ್ಕಳಲ್ಲಿ ದೇಶಿ ಸಂಸ್ಕೃತಿ ಬೆಳೆಸಲು ಪ್ರಯತ್ನಿಸಿ

ರಾಯಚೂರು: ಇಂದಿನ ದಿನಗಳಲ್ಲಿ ಯುವಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾರಣ ಪಾಲಕರು, ಶಿಕ್ಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ದೇಶಿ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಅವನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಸವರಾಜ ಗೌರಂಪೇಟೆ ಹೇಳಿದರು.
ಸ್ಥಳೀಯ ಹಾಷ್ಮಿಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಕಾರಿ ಧುರೀಣ ದಿ.ಸುಭಾಷರೆಡ್ಡಿ ಪಾಟೀಲ್ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಹಾಗೂ ಸೇವಾದಳ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾದಳದಿಂದ ಮಕ್ಕಳಲ್ಲಿ ಭಾವೈಕ್ಯತೆ, ದೇಶಾಭಿಮಾನ, ಶಿಸ್ತು ಬೆಳೆಯುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಕಾರಿ ಪರಶುರಾಮ್ ಹುಜರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ರಾಷ್ಟ್ರದ ಬುನಾದಿಯಾಗಿದ್ದು, ಮಕ್ಕಳಲ್ಲಿ ನೈತಿಕತೆ, ಸೇವಾ ಮನೋಭಾವ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಅವರನ್ನು ತಯಾರು ಮಾಡಬೇಕು ಎಂದು ಹೇಳಿದರು.
ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ ಮಾತನಾಡಿ, ಪ್ರತಿಯೊಬ್ಬರು ರಾಷ್ಟ್ರಧ್ವಜದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಅದಕ್ಕೆ ಗೌರವ ಕೊಡುವುದನ್ನು ಕಲಿಯಬೇಕು. ಮಕ್ಕಳಲ್ಲಿ ಚಿಕ್ಕವರಿದ್ದಾಗಲೇ ರಾಷ್ಟ್ರ ಪ್ರೇಮ ಮೂಡುವಂತೆ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಹಮ್ಮಿಕೊಂಡಿದ್ದ ಭಾವೈಕ್ಯತಾ ಜಾಥಾಗೆ ಬಿಇಒ ಚಂದ್ರಶೇಖರ ಭಂಡಾರಿ ಚಾಲನೆ ನೀಡಿದರು. ಸೇವಾದಳ ರಾಜ್ಯ ಕೋಶಾಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ, ರೆಡ್‌ಕ್ರಾಸ್ ಕಾರ್ಯದರ್ಶಿ ಅತಾವುಲ್ಲಾ, ಚಂದ್ರಶೇಖರ ರೆಡ್ಡಿ, ಮಲ್ಲೇಶ ನಾಯಕ, ಕಲ್ಲಯ್ಯಸ್ವಾಮಿ, ಶರಣರೆಡ್ಡಿ ಇದ್ದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಕಾರಿ ಎನ್.ಎಚ್.ಬಾಷಾ, ಸೇವಾದಳ ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪ ಕ್ಯಾದಿಗ್ಗೇರಾ, ಪದಾಕಾರಿಗಳಾದ ಮಲ್ಲಿಕಾರ್ಜುನ ರೆಡ್ಡಿ, ಸಿ.ಬಿ.ಪಾಟೀಲ್, ಚಂದ್ರಶೇಖರ ಗೂಗೇಬಾಳ್, ಶಿವಪ್ಪಗೌಡ ಕಲ್ಲೂರ, ದಾನಮ್ಮ ಸುಭಾಷಚಂದ್ರ, ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿನಮಗೇರಿ ಉಪಸ್ಥಿತರಿದ್ದರು.