ಯಲಬುರ್ಗಾದ ಎಸ್.ಎ.ನಿಂಗೋಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತರಬೇತಿಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು. ತಾಪಂ ಇಒ ಸಂತೋಷ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಸಂಸ್ಥೆಯ ಅಧ್ಯಕ್ಷ ಎಸ್.ಎ.ನಿಂಗೋಜಿ, ಅಪರ ಸರ್ಕಾರಿ ವಕೀಲ ಮಲ್ಲಿಕಾರ್ಜುನ ಪಾಟೀಲ್, ಶರಣಪ್ಪ ರಾಂಪುರ, ವಕೀಲ ರಾಜಶೇಖರ ನಿಂಗೋಜಿ ಇತರರಿದ್ದರು. 
ಜಿಲ್ಲೆ

ಸತ್ಯ ಶುದ್ಧ ಕಾಯಕಕ್ಕೆ ಮಹತ್ವ ನೀಡಿ

ರುದ್ರಪ್ಪ ವಾಲಿ

ಯಲಬುರ್ಗಾ: ಜವಾಬ್ದಾರಿಯ ಅರಿವನ್ನು ಇಟ್ಟುಕೊಂಡು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕಾಗಿದೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

ಪಟ್ಟಣದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಉದ್ಘಾಟಿಸಿ ಮಾತನಾಡಿದರು.
ದೇಶಭಕ್ತಿಗಿಂತ ಮಾನವೀಯತೆ ದೊಡ್ಡದು. ಅದನ್ನು ಅಳವಡಿಸಿಕೊಂಡಾಗ ನಿಜವಾದ ಮಾನವರಾಗುತ್ತೇವೆ.

ಸತ್ಯ- ಶುದ್ಧ ಕಾಯಕಕ್ಕೆ ಮಹತ್ವ ನೀಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಆರೋಗ್ಯದ ಪರಿಕಲ್ಪನೆ ಬರುತ್ತದೆ. ಆ ದಿಶೆಯಲ್ಲಿ ಎಲ್ಲರೂ ಗಮನಹರಿಸಬೇಕಾದ ಅಗತ್ಯತೆ ಇದೆ ಎಂದರು.

ಪ್ರಮುಖರಾದ ರತ್ನಮ್ಮ ನಿಂಗೋಜಿ, ರವಿ ನಿಂಗೋಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಬಸನಗೌಡ ಪಾಟೀಲ್ ಇತರರಿದ್ದರು.