ಮಹಾಲಿಂಗಪುರ: ತನ್ನನ್ನು ತಾನು ಜಯಿಸಿಕೊಳ್ಳುವವನೇ ನಿಜವಾದ ವಿಜೇತ ಎಂದ ಮಹಾವೀರರು ಧ್ಯಾನದ ಮಹತ್ವ ವಿವರಿಸಿದ್ದಾರೆ ಎಂದು ಜೈನ ಸಮಾಜದ ಮುಖಂಡ ಪಿಯೂಷ್ ಒಸ್ವಾಲ ಹೇಳಿದರು.
ಪಟ್ಟಣದ ಜೋಡು ರಸ್ತೆಯಲ್ಲಿರುವ ಶ್ರೀ ಸುಮತಿನಾಥ ಶ್ವೇತಾಂಬರ ಜೈನ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಜೈನ ಧರ್ಮದ 24ನೇ ತೀಥರ್ಂಕರ ಮಹಾವೀರರ ಜಯಂತಿಯಲ್ಲಿ ಅವರು ಮಾತನಾಡಿದರು.
ಅಹಿಂಸೆಯೇ ಶ್ರೇಷ್ಠ ಧರ್ಮ. ಅಹಿಂಸೆಯೆಂದರೆ ಕೇವಲ ದೈಹಿಕ ಹಿಂಸೆ ಅಥವಾ ನೋವಿಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿಯ ಆಲೋಚನೆಗಳು, ಮಾತು ಮತ್ತು ಕಾರ್ಯಗಳನ್ನೂ ಪ್ರತಿನಿಧಿಸುತ್ತದೆ. ಸತ್ಯವೇ ಮೋಕ್ಷಕ್ಕೆ ಮೊದಲ ದಾರಿಯೆಂದು ನುಡಿದಿದ್ದಾರೆ ಎಂದರು.
ಜೈನ ಸಮಾಜದ ನಿಲೇಶ ಒಸ್ವಾಲ ಮಾತನಾಡಿ, ಮಹಾವೀರ ಜೈನ ಧರ್ಮದ 24ನೇ ಮತ್ತು ಕೊನೆಯ ತೀಥರ್ಂಕರರೆನ್ನುವ ಹೆಮ್ಮೆಗೆ ಪಾತ್ರರಾದವರು. ಜೈನ ಧರ್ಮದ ಮೂಲ ತತ್ವಗಳನ್ನು ಸ್ಥಾಪಿಸಿದವರು ಕೂಡ ಅವರೆ ಎಂದರು.
ಜೈನ ಸಮುದಾಯದ ಮುಖಂಡರಾದ ಕೆಮಚಂದ ಒಸ್ವಾಲ, ಶಿವಲಾಲ ಜೈನ, ಅಶೋಕ ಒಸ್ವಾಲ, ಪಾಪು ಒಸ್ವಾಲ, ನಿರ್ಮಲ ಒಸ್ವಾಲ, ಕಾಂತಿಲಾಲ ಕೊಠಾರಿ, ನಿಲೇಶ ಒಸ್ವಾಲ, ಪಂಕಜ್ ಕೋರವಾಲ, ಹರ್ಷ ಒಸ್ವಾಲ, ಮೇಘ ಒಸ್ವಾಲ ಪಟ್ಟಣದ ಗಣ್ಯರಾದ ಚನ್ನಪ್ಪ ಪಟ್ಟಣಶೆಟ್ಟಿ, ಶೇಖರ ಅಂಗಡಿ, ಮಹಾಲಿಂಗಪ್ಪ ತಟ್ಟಿಮನಿ, ಹಣಮಂತ ಶಿರೋಳ, ಎ್.ಎಚ್. ಕುಂಟೋಜಿ ಇದ್ದರು.