ಅಳವಂಡಿ ಶ್ರೀಸಿದ್ದೇಶ್ವರ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಮರುಳಾರಾದ್ಯ ಶಿವಾಚಾರ್ಯರು, ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಅನ್ವರ ಗಡಾದ, ಸುರೇಶ ದಾಸರಡ್ಡಿ, ವಿಶ್ವನಾಥ, ರಮೇಶ ಭಾವಿಹಳ್ಳಿ, ರಾಜೇಶ ಇನಾಮದಾರ, ರವಿಶಂಕರ ಇನಾಮದಾರ, ಮಂಜುನಾಥ ಹಿರೇಮಠ, ದೇವಪ್ಪ, ಬೀಮರಡ್ಡಿ, ಚಿಕ್ಕವೀರಜ್ಜ, ಪ್ರಶಾಂತಗೌಡ, ಪ್ರಕಾಶ, ನೀಲಪ್ಪ, ಬಸಯ್ಯ ಹನುಮಂತಪ್ಪ ಕರಡಿ, ಜಗನ್ನಾಥರಡ್ಡಿ ಇದ್ದರು. 
ಜಿಲ್ಲೆ

ಸತ್ಯಕ್ಕೆ ಶಾಶ್ವತ ಜಯ ಖಚಿತ

Kopala - Desk - Eraveni

ಅಳವಂಡಿ: ಶರಣರ ಆದರ್ಶಗಳು ಬದುಕಿಗೆ ದಾರಿದೀಪ ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀಮರುಳಾರಾದ್ಯ ಶಿವಾಚಾರ್ಯರು ಹೇಳಿದರು.

ಗ್ರಾಮದ ಶ್ರೀಸಿದ್ದೇಶ್ವರ ಮಠದಲ್ಲಿ ನಡೆದ 24ನೇ ಮಾಸಿಕ ಶಿವಾನುಭವ ಆದ್ಯಾತ್ಮಿಕ ಸಂತ್ಸಂಗ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಸತ್ಯ, ಧರ್ಮ, ನೀತಿ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ.

ಸುಳ್ಳಿನಿಂದ ಕ್ಷಣಿಕ ಫಲ ಸಿಕ್ಕರೆ, ಸತ್ಯಕ್ಕೆ ಶಾಶ್ವತ ಜಯ ಸಿಗುತ್ತದೆ. ಕಳೆದ ಸಿದ್ದೇಶ್ವರ ಜಾತ್ರೆಯಲ್ಲಿ ಕಳೆದಿದ್ದು, ಅಭರಣ ದೊರೆತ ವ್ಯಕ್ತಿ ಮಠಕ್ಕೆ ನೀಡಿ ಕಳೆದುಕೊಂಡ ವ್ಯಕ್ತಿಗೆ ನೀಡುವಂತೆ ತಿಳಿಸಿದ್ದರು. ಇದು ಅವರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಅವರು ಸತ್ಯ ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ, ಗುರುವಿನ ಮಾತು ಸಂಸ್ಕಾರದ ದಾರಿ ತೋರಿಸುತ್ತೆ. ಸಾಧನೆ ಮಾಡಬೇಕಾದರೆ ಗುರುವಿನ ಮಾರ್ಗ ಅವಶ್ಯ ಎಂದರು.

ಸಿಕ್ಕ ಅಭರಣವನ್ನು ಮರಳಿಸಿದ ಪರಮೇಶ್ವರ ಹೊರಪೇಟಿ ಅವರನ್ನು ಗೌರವಿಸಲಾಯಿತು. ಅಭರಣ ಕಳೆದುಕೊಂಡಿದ್ದ ಮಾರುತಿ ತಳವಾರಗೆ ಮರಳಿಸಲಾಯಿತು.

ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಅನ್ವರ ಗಡಾದ, ಸುರೇಶ ದಾಸರಡ್ಡಿ, ವಿಶ್ವನಾಥ, ರಮೇಶ ಭಾವಿಹಳ್ಳಿ, ರಾಜೇಶ ಇನಾಮದಾರ, ರವಿಶಂಕರ ಇನಾಮದಾರ, ಮಂಜುನಾಥ ಹಿರೇಮಠ, ದೇವಪ್ಪ, ಬೀಮರಡ್ಡಿ, ಚಿಕ್ಕವೀರಜ್ಜ, ಪ್ರಶಾಂತಗೌಡ, ಪ್ರಕಾಶ, ನೀಲಪ್ಪ, ಬಸಯ್ಯ ಹನುಮಂತಪ್ಪ ಕರಡಿ, ಜಗನ್ನಾಥರಡ್ಡಿ ಇದ್ದರು.