ಸಾಗರದ ಎಲ್‌ಬಿ ಕಾಲೇಜಿನ ಉಪನ್ಯಾಸಕರ ಪತ್ತಿನ ಸಹಕಾರ ಸಂಘದಿಂದ ಡಾ. ಮೂಕಪ್ಪ ನಾಯ್ಕ ಅವರನ್ನು ಅಭಿನಂದಿಸಲಾಯಿತು. ಡಾ. ಲಕ್ಷ್ಮೀಶ್, ಪ್ರೊ. ಪಿ.ದಯಾನಂದ್, ರಂಗನಾಥ್, ಡಾ. ಹನುಮಂತಪ್ಪ, ಎಂ.ಎಸ್.ಭಟ್ ಇದ್ದರು.  
ಜಿಲ್ಲೆ

ನಂಬಿಕೆಯೇ ಸಹಕಾರ ಕ್ಷೇತ್ರದ ಜೀವಾಳ

ಸಾಗರ: ದೇಶದ ಆರ್ಥಿಕತೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ದೊಡ್ಡದು. ಸಹಕಾರ ಕ್ಷೇತ್ರದಲ್ಲಿ ಯುವಜನರು ಪಾಲ್ಗೊಳ್ಳುವಂತೆ ಆಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಆಗಬೇಕು. ಸಹಕಾರ ಕ್ಷೇತ್ರಕ್ಕೆ ನಂಬಿಕೆಯೇ ಬುನಾದಿ ಎಂದು ಎಲ್‌ಬಿ ಕಾಲೇಜಿನ ಪ್ರಾಚಾರ್ಯ ಡಾ. ಲಕ್ಷ್ಮೀಶ್ ಹೇಳಿದರು.

ನಗರದ ಎಲ್‌ಬಿ ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ಸಿಬ್ಬಂದಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಮಾಜಿ ಅಧ್ಯಕ್ಷ ಡಾ. ಸಿ.ಕೆ.ಮೂಕಪ್ಪ ನಾಯ್ಕ ಅವರನ್ನು ಅಭಿನಂದಿಸಿ ಮಾತನಾಡಿ, ಡಾ. ಸಿ.ಕೆ.ಮೂಕಪ್ಪ ನಾಯ್ಕ ಅವರು ಸಂಘದ ಅಧ್ಯಕ್ಷರಾಗಿ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಪತ್ತಿನ ಸಹಕಾರ ಸಂಘವನ್ನು ಎ ಗ್ರೇಡ್‌ಗೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರಿಗೂ ಸಹಕಾರಿಯ ಪಾಲು ಸಿಗುವಂತೆ ಮಾಡಿದ್ದಾರೆ. ಈ ಸಾಲಿನಲ್ಲಿ ಸದಸ್ಯರಿಗೆ ಶೇ.9 ಲಾಭಾಂಶ ನೀಡುವಲ್ಲಿ ಅವರ ಪಾತ್ರ ಪ್ರಮುಖ ಎಂದರು.
ಉಪಾಧ್ಯಕ್ಷ ಪ್ರೊ. ಪಿ.ದಯಾನಂದ್, ಕಾರ್ಯದರ್ಶಿ ರಂಗನಾಥ್, ಡಾ. ಹನುಮಂತಪ್ಪ, ಎಂ.ಎಸ್.ಭಟ್, ಡಾ. ನಿರಂಜನಮೂರ್ತಿ, ಡಾ. ಶಕುಂತಲಾ ಪಿ.ಹಿರೇಮಠ, ವಾಣಿ, ಅಂಗಡಿ ಶಿವಾನಂದ್, ಸುಭಾಷ್, ಚಂದ್ರಪ್ಪ, ನಾಗರಾಜ್, ದೀಪ್ತಿ ನಾಯಕ್ ಇತರರಿದ್ದರು.