ಜಿಲ್ಲೆ

ಟ್ರಂಪ್​ ಹೋಟೆಲ್​ ರೆಂಟಲ್​ ಹೆಸರಿನಲ್ಲಿ ವಕೀಲರಿಗೆ ವಂಚನೆ

ಹಾವೇರಿ: ಟ್ರಂಪ್​ ಹೋಟೆಲ್​ ರೆಂಟಲ್​ ಹೆಸರಿನಲ್ಲಿ ವಕೀಲರೊಬ್ಬರಿಗೆ ದಿನಕ್ಕೆ ಶೇ. 3ರಷ್ಟು ಲಾಭಾಂಶ ಕೊಡುವುದಾಗಿ ಬರೋಬ್ಬರಿ 5.93 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ನಗರದ ವಕೀಲರೊಬ್ಬರು ಯೂಬ್ಯೂಟ್​ ನೋಡುತ್ತಿದ್ದಾಗ "ಟ್ರಂಪ್​ ಹೋಟೆಲ್​ ರೆಂಟಲ್​, ದುಪ್ಪಟ್ಟು ಹಣ ಮಾಡಬಹುದು' ಎಂಬ ವಿಷಯದ ಬಗ್ಗೆ ಶಾಟ್ಸ್​ ಬಂದಿದೆ. ವಕೀಲರು ಅದನ್ನು ಒತ್ತಿ ತಮ್ಮ ಹೆಸರನ್ನು ರಿಜಿಸ್ಟರ್​ ಮಾಡಿದ್ದಾರೆ. ನಂತರ 1500 ರೂ. ಹಾಕಿದ್ದಾರೆ. ಅದಕ್ಕೆ ಪ್ರತಿಯಾಗಿ ದಿನವೊಂದಕ್ಕೆ ಶೇ. 3ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ವಕೀಲರು ನಂತರ 5.93 ಲಕ್ಷ ರೂ. ಹಾಕಿದ್ದಾರೆ. ಆದರೆ, ವಕೀಲರಿಗೆ ಮರಳಿ ಯಾವುದೆ ಹಣ ನೀಡದೆ ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.