ಜಿಲ್ಲೆ

ಉತ್ತರ ಕನ್ನಡದ 32 ಕಡೆಗಳಲ್ಲಿ ಚಾರಣ ಪಥ

Uttara Kannada - Subash Hegde

ಕಾರವಾರ: ವಿಶಿಷ್ಟ ಪರಿಸರ ಹೊಂದಿರುವ ಉತ್ತರ ಕನ್ನಡದ ಸೌಂದರ್ಯ ಅರಿಯಲು ಪ್ರವಾಸಿಗರಿಗೆ ಶೀಘ್ರ ಅಧಿಕೃತ ಅವಕಾಶ ಸಿಗಲಿದೆ.

ಪರಿಸರ ಪ್ರವಾಸೋದ್ಯಮ ಉತ್ತೇಜನ ಮಾಡುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಅರಣ್ಯ ವಿಭಾಗಗಳಲ್ಲಿ ಒಟ್ಟು 32 ಚಾರಣ ಪಥಗಳನ್ನು ಗುರುತಿಸಿ ಅವುಗಳಲ್ಲಿ ಚಾರಣಿಗರ ಸಂಚಾರಕ್ಕೆ ಅಧಿಕೃತವಾಗಿ ಅವಕಾಶ ಮಾಡಿಕೊಡುವ ಸಂಬAಧ ಯೋಜನೆ ಸಿದ್ಧಗೊಂಡಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಅದಕ್ಕೆ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಶ್ಚಿಮ ಘಟ್ಟದ ಗಿರಿ ಕಂದರಗಳು, ಬಿರು ಬೇಸಿಗೆಯಲ್ಲೂ ಹರಿಯುವ ನದಿಗಳು, ಸಮುದ್ರದ ತಡಿ, ವಿಶಿಷ್ಟ ಜೀವ ಸಂಕುಲಗಳನ್ನು ಉತ್ತರ ಕನ್ನಡ ಹೊಂದಿದೆ. ಯಾಣ, ಸಿಂಥೇರಿ ರಾಕ್‌ನಂಥ ಅಪರೂಪದ ಶಿಲಾ ರಚನೆಗಳೂ ಜಿಲ್ಲೆಯಲ್ಲಿವೆ. ಹಲವು ನಯನ ಮನೋಹರ ಜಲಪಾತಗಳಿಗೆ ಹೆಸರಾಗಿದೆ. ಅವುಗಳ ಸೌಂದರ್ಯವನ್ನು ಸವಿಯಲು ದೇಶ ವಿದೇಶಗಳ ಪ್ರವಾಸಿಗರು ಉತ್ಸುಕರಾಗಿದ್ದಾರೆ.

ಆದರೆ, ಪ್ರವಾಸಿಗರು ಯಾವುದೇ ಇಲಾಖೆಗಳಿಗೆ ಮಾಹಿತಿ ನೀಡದೇ ಕಾಡಿನಲ್ಲಿ ಚಾರಣ ಮಾಡಿಕೊಂಡು ತೆರಳಿ ಅಪಾಯಕ್ಕೆ ಸಿಲುಕಿದ ಸಾಕಷ್ಟು ಉದಾಹರಣೆಗಳಿವೆ. ಜಲಪಾತಗಳಲ್ಲಿ ಬಿದ್ದು ಪ್ರವಾಸಿಗರು ಸಾವನ್ನಪು÷್ಪವುದು, ಕಾಡಿನ ನಡುವೆ ಸಿಲುಕಿ ಮರಳಲು ಮಾರ್ಗ ತಿಳಿಯದೇ ತೊಂದರೆಗೊಳಗಾಗುವುದೂ ನಡೆದಿದೆ. ಕಾಡಿನಲ್ಲಿ ಗಿಡ, ಮರಗಳಿಗೆ ಹಾನಿ ಮಾಡುವುದು, ಕಾಡು ಪ್ರಾಣಿಗಳ ಬೇಟೆ, ಬೆಂಕಿ ಹಚ್ಚುವುದು, ಪ್ಲಾಸ್ಟಿಕ್‌ನಂಥ ಅಪಾಯಕಾರಿ ತ್ಯಾಜ್ಯಗಳನ್ನು ಎಸೆಯುವುದು, ಜಲಮೂಲಗಳನ್ನು ಮಲಿನ ಮಾಡುವುದು, ಬಂಡೆಗಳ ಮೇಲೆ ಚಿತ್ರಕಲೆ ಮುಂತಾದ ಹಲವು ವಿಕೃತಿಗಳೂ ಹೆಚ್ಚುತ್ತಿವೆ.

ದಾಂಡೇಲಿ, ಶಿರಸಿ, ಯಲ್ಲಾಪುರ ಸೇರಿ ಹಲವೆಡೆ ರೆಸಾರ್ಟ್, ಹೋಂ ಸ್ಟೇ ಮುಂತಾದವುಗಳ ಪ್ರವಾಸೋದ್ಯಮಿಗಳು, ಕಾಡಿನಲ್ಲಿ ಪ್ರವಾಸಿಗರಿಗೆ ಚಾರಣ ಮಾಡಿಸುತ್ತಿದ್ದಾರೆ. ಅದರಿಂದ ಹಣ ಗಳಿಸುತ್ತಿದ್ದಾರೆ. ಆದರೆ, ಇಲಾಖೆ ಇವುಗಳ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಇಂಥ ಅಪಾಯಗಳನ್ನು ತಪ್ಪಿಸಲು ಈಗ ಅರಣ್ಯ ಇಲಾಖೆ ಅಽಕೃತವಾಗಿ ಕೆಲವು ಚಾರಣ ಪಥಗಳನ್ನು ಗುರುತಿಸಲಿದ್ದು, ಅಲ್ಲಿ ಮಾತ್ರ ಪ್ರವಾಸಿಗರ ಸಂಚಾರಕ್ಕೆ ಅವಕಾಶ ನೀಡಲು ಸಿದ್ಧತೆ ನಡೆಸಲಾಗಿದೆ.

ನೇಚರ್ ಗೈಡ್

ಹಳಿಯಾಳ ವಿಭಾಗದಲ್ಲಿ ಒಟ್ಟು 5 ಚಾರಣ ಪಥಕ್ಕೆ ಅನುಮೋದನೆ ದೊರಕಿದೆ. ಅಲ್ಲಿ ಮೂಲ ಸೌಕರ್ಯವನ್ನು ಶೀಘ್ರದಲ್ಲಿ ಒದಗಿಸಿ. ಶೀಘ್ರದಲ್ಲಿ ಚಾರಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಡಿಎಫ್‌ಒ ಪ್ರಶಾಂತ ಕುಮಾರ್ ತಿಳಿಸಿದ್ದಾರೆ. ಜಿಲ್ಲೆಯ ಇತರೆಡೆಯೂ 3 ರಿಂದ 10 ಕಿಮೀವರೆಗೂ ಇರುವ ಮಾರ್ಗಗಳನ್ನು ಪ್ರತಿ ಅರಣ್ಯ ವಿಭಾಗದಲ್ಲಿ ಗುರುತಿಸಲಾಗಿದೆ. ಮಾರ್ಗದ ನಡುವೆ ಬೆಂಚ್‌ಗಳು, ಶೌಚಗೃಹಗಳು ಮುಂತಾದ ಮೂಲ ಸೌಕರ್ಯಗಳನ್ನು ಒಸಗಿಸಲಾಗುತ್ತದೆ. ಈಗಾಗಲೇ ಹಲವು ಪರಿಸರಾಸಕ್ತರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಲಾಗಿದೆ. `ನೇಚರ್ ಗೈಡ್' ಹೆಸರಿನ ಈ ಮಾರ್ಗದರ್ಶಕರು ಈ ಚಾರಣ ಮಾರ್ಗದ ಗುಂಟ ಇರಲಿದ್ದಾರೆ. ಅವರು ಆ ಮಾರ್ಗದಲ್ಲಿ ಕಂಡುಬರುವ ಅರಣ್ಯದ ವಿಶಿಷ್ಟತೆಗಳನ್ನು ತಿಳಿಸಲಿದ್ದಾರೆ.

ಕೆಟಿಆರ್‌ನಲ್ಲಿ ಅನುಮತಿ ಸಿಕ್ಕಿಲ್ಲ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ(ಕೆಟಿಆರ್) ವ್ಯಾಪ್ತಿಯಲ್ಲಿ ಕೆಲವು ಚಾರಣ ಪಥಗಳನ್ನು ಗುರುತಿಸಿ, ಅಲ್ಲಿ ಪ್ರವಾಸಿಗರ ಸಂಚಾರಕ್ಕೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ರಾಷ್ಟ್ರೀಯ  ಹುಲಿ ಸಂರಕ್ಷಣಾ ಪ್ರಾಽಕಾರ ಇದುವರೆಗೂ ಅನುಮತಿ ನೀಡಿಲ್ಲ ಎಂದು ಕೆಟಿಆರ್ ನಿರ್ದೇಶಕ ನೀಲೇಶ ಶಿಂಧೆ ತಿಳಿಸಿದ್ದಾರೆ. ಪರಿಸರವಾದಿಗಳ ವಿರೋಧ ಅರಣ್ಯದ ನಡುವೆ ಮಾನವನ ಓಡಾಟಕ್ಕೆ ಅನುಮತಿ ನೀಡುವುದು ಸರಿಯಲ್ಲ ಎಂದು ಕೆಲವು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ದಿ.ಗ್ರೇಟ್ ಕೆನರಾ ಟ್ರೇಲ್ ಹೆಸರಿನಲ್ಲಿ ದಾಂಡೇಲಿಯಿಂದ ಜೋಗ ವರೆಗೆ ಚಾರಣ ಪಥ ಗುರುತಿಸಲಾಗಿತ್ತು. ಮಲೆಮನೆ ಮುಂತಾದ ಮಿಸ್ಟೀರಿಕಾ ಸ್ವಾಂಪ್‌ನಂಥ ಅತಿ ಸೂಕ್ಷ÷್ಮ ಕಾಡು ಹೊಂದಿರುವ ಸ್ಥಳಗಳಲ್ಲೂ ಈ ಚಾರಣ ಪಥ ಹಾದು ಹೋಗಲಿತ್ತು. ಅಂಥ ಜೈಗು ಪ್ರದೇಶದಲ್ಲಿ ಮಾನವನ ಓಡಾಟವೂ ಪರಿಸರಕ್ಕೆ ತೀವ್ರ ಹಾನಿ ಮಾಡಲಿದೆ. ಇದರಿಂದ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಆದರೆ, ಈಗ ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ಚಾರಣಕ್ಕೆ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಇಲ್ಲ ಎಂದು ಪರಿಸರ ವಿಜ್ಞಾನಿ ಹೊನ್ನಾವರ ಮೂಲದ ಡಾ.ರವಿ ಹೆಗಡೆ ತಿಳಿಸಿದ್ದಾರೆ. ಕೆಟಿಆರ್‌ನಲ್ಲಿ ಚಾರಣ ಪಥಕ್ಕೆ ಅನುಮತಿ ನೀಡದಂತೆ ಹಲವು ಪರಿಸರವಾದಿಗಳು ಎನ್‌ಟಿಸಿಎಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ನಿರ್ದಿಷ್ಟ ಸ್ಥಗಳನ್ನು ಗುರುತಿಸಿ ಅಲ್ಲಿ ಚಾರಣಕ್ಕೆ ಅನುಮತಿ ನೀಡಲು ಕೆನರಾ ವೃತ್ತ ಅರಣ್ಯ ಸಂರಕ್ಷಣಾಽಕಾರಿಗಳು ಕರ್ನಾಟಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅನುಮತಿ ಕೋರಿದ್ದಾರೆ ಎಂಬ ಮಾಹಿತಿ ಇದೆ. ಒಮ್ಮೆ ಚಾರಣ ಪಥ ಅಽಕೃತಗೊಂಡ ನಂತರ ನಮ್ಮ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗುವುದು. ಅಲ್ಲಿ ಅರಣ್ಯಕ್ಕೆ, ವನ್ಯಜೀವಿಗಳಿಗೆ ಯಾವುದೇ ಹಾನಿಯಾಗದಂತೆ ಟೂರಿಸ್ಟ್ ಗೈಡ್‌ಗಳ ಜತೆ ಮಾತ್ರ ತೆರಳಿ ಪರಿಸರ ಸೌಂದರ್ಯ ಆಸ್ವಾದಿಸಲು ಅನುಮತಿ ನೀಡಲಾಗುವುದು. ಕೆ.ಲಕ್ಷ್ಮೀಪ್ರಿಯಾ  ಜಿಲ್ಲಾಧಿಕಾರಿ, ಉತ್ತರ ಕನ್ನಡ