ರಾಯಚೂರು: ರಸ್ತೆ ಮೇಲೆ ಹೋಗುತ್ತಿದ್ದ ಕುರಿ ಹಿಂಡಿನ ಮೇಲೆ ಲಾರಿ ಹರಿದು ಸ್ಥಳದಲ್ಲಿಯೇ 11 ಕುರಿಗಳು ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಯರಮರಸ್ ಬಳಿಯ ಬೈಪಾಸ್ ರಸ್ತೆ ಬಳಿ ಬುಧವಾರ ಜರುಗಿದೆ.
ತೆಲಂಗಾಣದ ಮಕ್ತಲ್ ಮೂಲದ ಹೊನ್ನಪ್ಪ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಕುರಿಗಳ ಹಿಂದು ಯರಮರಸ್ ಮಾರ್ಗವಾಗಿ ಮನ್ಸಲಾಪುರ ಕಡೆಗೆ ತೆರಳುತ್ತಿರುವಾಗ ಎದುರಿಗೆ ಬಂದ ಲಾರಿ ಚಾಲಕನ ಹಿಡಿತ ತಪ್ಪಿ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಜತೆಗೆ ದ್ವಿಚಕ್ರ ವಾಹನಕ್ಕೂ ಡಿಕ್ಕಿ ಹೊಡೆದಿದೆ. ಇದರಿಂದ 11 ಕುರಿತು ಸ್ಥಳದಲ್ಲಿಯೇ ಮೃತಪಟ್ಟಿದ್ದು, 9 ಕುರಿಗಳ ಕಾಲು ಮುರಿದಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.