ಜಿಲ್ಲೆ

ಗುದ್ದೋಡಿದ ಲಾರಿ ಚಾಲಕ ಕೊನೆಗೂ ಬಂಧನ

Uttara Kannada - Subash Hegde
ಯಲ್ಲಾಪುರ:  ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಸವಾರರ ಸಾವಿಗೆ ಕಾರಣವಾಗಿದ್ದ ಟ್ಯಾಂಕರ್ ಚಾಲಕನನ್ನು ಯಲ್ಲಾಪುರ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.
    ಉತ್ತರ ಪ್ರದೇಶದ ಮಿರ್ಜಾಪುರದ ಶೀತಲಾಪ್ರಸಾದ ಅಲಗೂ ಬಿಂದ ಬಂಧಿತ ಚಾಲಕ.‌ ಕಳೆದ ಜೂನ್ 8 ರಂದು ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಾಮು ಮಾರುತಿ ಗುಜಲೂರ ಹಾಗೂ ವಿಷ್ಣು ಜಯಪ್ಪ ಗುಜಲೂರ ಬೈಕ್ ಮೇಲೆ ಹೋಗುತ್ತಿದ್ದಾಗ ಚಿಕ್ಕಮಾವಳ್ಳಿ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದು ಹೋಗಿತ್ತು.‌ ಇಬ್ಬರೂ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದರು.
   ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡ ರಚಿಸಿಕೊಂಡು, ಡಿಕ್ಕಿ ಹೊಡೆದ ವಾಹನ ಹಾಗೂ ಚಾಲಕನ ಪತ್ತೆಗೆ ಜಾಲ‌ ಬೀಸಿದ್ದರು.‌ ಕಿರವತ್ತಿ ಚೆಕ್ ಪೋಸ್ಟ್ ಸಿಸಿಟಿವಿ ಕ್ಯಾಮರಾ, ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿಯ ಆಧಾರದ ಮೇಲೆ ಹುಬ್ಬಳ್ಳಿಯಲ್ಲಿ ಟ್ಯಾಂಕರ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.