ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ ಅರ್ಜುನ್ ಹಾಗೂ ದ್ವಿತೀಯ ಸ್ಥಾನ ಪಡೆದ ದಿಲೀಪ್ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು. 
ಜಿಲ್ಲೆ

ಷಟಲ್ ಬ್ಯಾಡ್ಮಿಂಟನ್ ವಿಜೇತ ತಂಡಕ್ಕೆ ಟ್ರೋಫಿ

ವಸಂತಕುಮಾರ್ ಬಿ

ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಜೈಭೀಮ್ ಯುವಕರ ಸಂಘದಿಂದ 3 ದಿನಗಳ ಕಾಲ ಆಯೋಜಿಸಿದ್ಧ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅರ್ಜುನ್ ಮತ್ತು ಮನು ತಂಡ ಪ್ರಥಮ ಸ್ಥಾನಗಳಿಸಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ಧ ಪಂದ್ಯಾವಳಿಯಲ್ಲಿ ಮಂಗಲ ಹಾಗೂ ಕಾಮಗೆರೆ ಗ್ರಾಮದಿಂದ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ನಿಗದಿಗೊಳಿಸಲಾಗಿದ್ದ 21 ಅಂಕಗಳಿಗೆ ಮಂಗಲದ ಅರ್ಜುನ್ ಮತ್ತು ಮನು ತಂಡ 21 ಅಂಕವನ್ನು ಗಳಿಸಿ ಪ್ರಥಮ ಸ್ಥಾನ ಪಡೆದರೆ, ದಿಲೀಪ್ ಮತ್ತು ಪ್ರವೀಣ್ ತಂಡ 17 ಅಂಕವನ್ನು ಗಳಿಸಿ ದ್ವಿತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ವಿತರಿಸಲಾಯಿತು.