ಜಿಲ್ಲೆ

ಹುಬ್ಬಳ್ಳಿಯಲ್ಲಿ ತ್ರಿಶೂಲಂ ಚಿತ್ರೀಕರಣ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ಕನ್ನಡ ಚಲನಚಿತ್ರ ತ್ರಿಶೂಲಂನ ಚಿತ್ರೀಕರಣ ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ನಡೆಯಿತು.

ವರೂರು ವಿಆರ್​ಎಲ್ ಸಂಸ್ಥೆಯ ಆವರಣದಲ್ಲಿ ಬೆಳಗ್ಗೆ ಹಾಗೂ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಮಧ್ಯಾಹ್ನ ಚಿತ್ರೀಕರಣ ನಡೆಯಿತು. ಚನ್ಮಮ್ಮ ವೃತ್ತದಲ್ಲಿ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ರವಿಚಂದ್ರನ್ ಹಾಗೂ ನಾಯಕಿ ನಟಿ ಸಾನ್ವಿ ಶ್ರೀವಾಸ್ತವ ಸಂಜೆಯವರೆಗೂ ಪಾಲ್ಗೊಂಡಿದ್ದರು. ಆರ್.ಎಸ್. ಪ್ರೋಡಕ್ಷನ್ಸ್​ನಡಿ ಓಂ ಪ್ರಕಾಶ ರಾವ್ ತ್ರಿಶೂಲಂ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಚನ್ನಮ್ಮ ವೃತ್ತದಲ್ಲಿ ಚಿತ್ರೀಕರಣ ವೇಳೆ ವೀಕ್ಷಣೆಗೆ ನೂರಾರು ಜನರು ಸೇರಿದ್ದರು. ಚಿತ್ರೀಕರಣಕ್ಕಾಗಿ ತ್ರಿಶೂಲಂ ತಂಡ ಸೋಮವಾರವೇ ಹುಬ್ಬಳ್ಳಿಗೆ ಆಗಮಿಸಿತ್ತು.