ಜಿಲ್ಲೆ

ಏಷ್ಯನ್ ರೋಲರ್ ಸ್ಕೇಟಿಂಗ್​ಗೆ ಆಯ್ಕೆ

Dharwada - Santosh Vaidya

ಹುಬ್ಬಳ್ಳಿ: ಚೀನಾದಲ್ಲಿ ಅಕ್ಟೋಬರ್ 18ರಿಂದ 28ರವರೆಗೆ ನಡೆಯಲಿರುವ 19ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್​ಶಿಪ್​ಗೆ ಹುಬ್ಬಳ್ಳಿಯ ತ್ರಿಷಾ ಜಡಾಲ ಆಯ್ಕೆಯಾಗಿದ್ದಾರೆ.

ಇಲ್ಲಿಯ ಜೆ.ಜಿ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ತ್ರಿಷಾ, ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಏಷ್ಯನ್ ಸ್ಕೇಟಿಂಗ್ ಚಾಂಪಿಯನ್​ಶಿಪ್​ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸ್ಕೇಟರ್ ಆಗಿದ್ದಾರೆ.