ಬೆಂಗಳೂರು: ನಗರದ ಹೊರವಲಯದಲ್ಲಿರುವ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು ( ಐಐಎಚ್‌ಆರ್) ಈ ತಿಂಗಳ 31ರಿಂದ ಜೂ.2ರವರೆಗೆ ಮಾವು, ಹಲಸು ಹಾಗೂ ಬಾಳೆ ಬೆಳೆಗಳಿಗೆ ಸಂಬಂಧಿಸಿದಂತೆ ‘ತ್ರಿಫಲ ವೈವಿಧ್ಯ ಪ್ರದರ್ಶನ-2024’ ಆಯೋಜಿಸಿದೆ.
ಈ ಪ್ರದರ್ಶನದಲ್ಲಿ 300 ವಿಶಿಷ್ಟವಾದ ಮಾವಿನ ತಳಿಗಳು ಹಾಗೂ ತಲಾ 100 ಹಲಸಿನ ಹಣ್ಣಿನ ವಿಧಗಳು ಹಾಗೂ ಬಾಳೆ ತಳಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಜತೆಗೆ ಈ ಬೆಳೆಗಳ ಕೃಷಿಗೆ ಸಂಬಂಧಿಸಿದ ಮೌಲ್ಯವರ್ಧಿತ ಉತ್ಪನ್ನ ಮತ್ತು ತಂತ್ರಜ್ಞಾನದ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ವೇಳೆ ಸ್ವ ಸಹಾಯ ಗುಂಪುಗಳು, ರೈತರು, ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಪ್ರೋತ್ಸಾಹಿಸಲಾಗುವುದು. ಅಲ್ಲದೆ ಈ ಬೆಳೆಗಳ ಪ್ರಚಾರಕ್ಕಾಗಿ ಸಂಸ್ಕರಣೆದಾರರು, ರ್ತುದಾರರ ಸಹಿತ ರೈತರು ಒಳಗೊಂಡಂತೆ ನೀತಿ ನಿರೂಪಕರೊಂದಿಗೆ ಸಂವಾದ ಸಭೆ ಆಯೋಜಿಸಲಾಗಿದೆ.
ತಾಜಾ ಹಣ್ಣುಗಳ ರಫ್ರ್ತುಹೆಚ್ಚಳ:
2022-23ರಲ್ಲಿ ಭಾರತವು 5,659 ಕೋಟಿ ರೂ. ಮೌಲ್ಯದ 9.65 ಲಕ್ಷ ಟನ್ ತಾಜಾ ಹಣ್ಣುಗಳನ್ನು ರಫ್ರ್ತುಮಾಡಿದ್ದು, ಈ ಪೈಕಿ ಶೇ.30 ಪಾಲು ಮಾವು, ಹಲಸು ಹಾಗೂ ಬಾಳೆ ಬೆಳೆಗೆ ಸೇರಿದ್ದಾಗಿದೆ. ಇದೇ ರೀತಿ 5,944 ಕೋಟಿ ರೂ. ಮೌಲ್ಯದ 4.97 ಲಕ್ಷ ಟನ್ ಸಂಸ್ಕರಿಸಿದ ಹಣ್ಣುಗಳನ್ನು ರಫ್ತು ಮಾಡಿದ್ದು, ಈ ಪೈಕಿ ಶೇ.50 ಮಾವಿನ ಮೌಲ್ಯವರ್ಧಿತ ಉತ್ಪನ್ನಗಳಿಂದ ರ‌್ತಾಗಿವೆ. ಈ ಹಿನ್ನೆಲೆಯಲ್ಲಿ ಈ ಮೂರೂ ಹಣ್ಣುಗಳ ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ನೀಡಲು ಪ್ರದರ್ಶನ ಆಯೋಜಿಸಲಾಗಿದೆ ಎಂದು ಐಐಎಚ್‌ಆರ್ ನಿರ್ದೇಶಕ ಪ್ರಕಾಶ್ ಪಾಟೀಲ ತಿಳಿಸಿದ್ದಾರೆ.