ಮುಂಡಗೋಡ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಕೃಷಿಸಖಿ, ಪಶುಸಖಿ ಹಾಗೂ ರೈತರನ್ನು ಧಾರವಾಡ ಕೃಷಿ ಮೇಳಕ್ಕೆ ಒಂದು ದಿನದ ಪ್ರವಾಸಕ್ಕೆ ಮಂಗಳವಾರ ಕರೆದುಕೊಂಡು ಹೋಗಲಾಯಿತು.
ರೈತರು ಧಾರವಾಡ ಕೃಷಿ ಮೇಳಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು ಈ ಬಸ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಚಾಲನೆ ನೀಡಿದರು.
ತೋಟಗಾರಿಕಾ ಇಲಾಖೆಯ ಅಧಿಕಾರಿ ಕೃಷ್ಣ ಕೋಳೂರ, ಕೆ.ಬಿ.ಪಠಾಣ, ರಮೇಶ ಜಮಖಂಡಿ ಇತರರಿದ್ದರು.