ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳೊಂದಿಗೆ ದಿವಂಗತ ವಿ.ಶ್ರೀನಿವಾಸ ಪ್ರಸಾದ್ 
ಜಿಲ್ಲೆ

ಶ್ರೀನಿವಾಸ ಪ್ರಸಾದ್ ನಿಧನಕ್ಕೆ ತ್ರಿನೇತ್ರ ಮಹಂತ ಶ್ರೀಗಳ ಸಂತಾಪ

ಶ್ರೀರಂಗಪಟ್ಟಣ: ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನಕ್ಕೆ ಚಂದ್ರವನ ಮಠದ ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಸದ ಹಾಗೂ ಸಚಿವರಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನಪ್ರಿಯರಾಗಿದ್ದ ಪ್ರಸಾದ್ ಅವರು ಬಡವರು ಮತ್ತು ದೀನದಲಿತರ ಅಭಿವೃದ್ಧಿಗೆ ಜೀವನವನ್ನು ಮುಡುಪಿಟ್ಟಿದ್ದರು. ಶ್ರೀಮಠದೊಂದಿಗೆ ಪ್ರಸಾದ್ ಉತ್ತಮ ಒಡನಾಟ ಹೊಂದಿದ್ದರು. ಅವರ ನಿಧನ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.