ಗುರುಪುರ: ಗುರುಪುರ ಗೋಳಿದಡಿಗುತ್ತಿನ ಮನೆಯಲ್ಲಿ ಸೆ.18ರಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ದೇವರ ವಾರ್ಷಿಕ ತ್ರಿಕಾಲ ಪೂಜೆ ದೇವಸ್ಥಾನದ ಅರ್ಚಕ ನಿರಂಜನ ಯಾಜಿ ಪೌರೋಹಿತ್ಯದಲ್ಲಿ ಜರುಗಿತು.
ಗೋಳಿದಡಿಗುತ್ತಿನ ಮನೆ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪುತ್ರಿಯರಾದ ಡಾ.ಸಮನಾ ಶೆಟ್ಟಿ, ನಿಷ್ಕಳಾ ಶೆಟ್ಟಿ, ತ್ರಿಶಿಕಾ ಶೆಟ್ಟಿ, ಉದ್ಭವಿ ಶೆಟ್ಟಿ ಅವರು ಪೂಜಾ ದೀೆ ಕೈಗೊಂಡಿದ್ದರು. ಪಾವಂಜೆ ದೇವಸ್ಥಾನ ಅರ್ಚಕರು ಪೂಜೆ ನೆರವೇರಿಸಿಕೊಟ್ಟರು.
ಸೆ.17ರಂದು ಸಂಜೆ ಪಾವಂಜೆ ದೇವಸ್ಥಾನದಿಂದ ಗುರುಪುರ ಗುತ್ತಿನ ಮನೆಗೆ ಆಗಮಿಸಿದ ಶ್ರೀ ದೇವರಿಗೆ ಸೆ.18ರಂದು ಮಧ್ಯಾಹ್ನ ವಿಶೇಷ ಪೂಜೆ, ಹೋಮ&ಹವನ, ಮಹಾಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಕಾರ್ಕಳ ಶ್ರೀ ಅನಂತಶಯನ ಪದ್ಮಾವತಿ ದೇವಸ್ಥಾನದ ಮಹಿಳಾ ಭಜನಾ ಮಂಡಳಿ ಸದಸ್ಯೆಯರಿಂದ ಭಜನಾ ಸಂಕೀರ್ತನೆ ನಡೆಯಿತು.
ಸಂಜೆ ಹೊತ್ತಿಗೆ ಗುತ್ತಿನ ಮನೆಯಿಂದ ಪಾವಂಜೆ ದೇವಸ್ಥಾನಕ್ಕೆ ಶ್ರೀ ದೇವರನ್ನು ಭಕ್ತಿ&ಭಾವದಿಂದ ಬೀಳ್ಕೊಡಲಾಯಿತು. ಒಂದು ದಿನದ ಪೂಜೆ ವೇಳೆ ಗುತ್ತಿನ ಚಾವಡಿ ಮಿತ್ರರು, ಹಲವು ಗುತ್ತಿನ ಮನೆಯವರ ಸಹಿತ ನೂರಾರು ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು.