ಮದ್ದೂರು ಪಟ್ಣಣದ ಟೌನ್ ಕ್ಲಬ್‌ನಲ್ಲಿ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಹಾಗೂ ಟೌನ್ ಕ್ಲಬ್ ವತಿಯಿಂದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿತ್ತು. ಡಾ.ಕೃಷ್ಣ, ಎಂ.ಜೆ.ಶ್ರೀಕಂಠಯ್ಯ, ವಿ.ಟಿ.ರವಿಕುಮಾರ್, ಚಂದ್ರ, ಪುಟ್ಟಸ್ವಾಮಿ, ಕೃಷ್ಣೇಗೌಡ, ಕೇಶವಕುಮಾರ್, ಎಂ.ಡಿ.ಮಹಾಲಿಂಗಯ್ಯ ಇದ್ದರು. 
ಜಿಲ್ಲೆ

ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗೆ ಶ್ರದ್ಧಾಂಜಲಿ

ನಾಗೇಶ ಎಸ್

ಮದ್ದೂರು: ಭೈರವೈಕ್ಯರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ನಿಧನ ಭಕ್ತವೃಂದಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚುಂಚಶ್ರೀ ಗೆಳೆಯಯರ ಬಳಗದ ಅಧ್ಯಕ್ಷ ಡಾ.ಕೃಷ್ಣ ಕಂಬನಿ ಮಿಡಿದರು.

ಪಟ್ಟಣದ ಟೌನ್ ಕ್ಲಬ್‌ನಲ್ಲಿ ಶನಿವಾರ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಹಾಗೂ ಟೌನ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಭೈರವೈಕ್ಯರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಗಳು ಜೀವಿತ ಅವಧಿಯಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಟ್ಟು, ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶ್ರೀ ಮಠದ ಉತ್ತರಾಧಿಕಾರಿಯಾಗಿ ಇತ್ತೀಚಿಗೆ ನೇಮಕಗೊಂಡಿರುವ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರು ಮಠ ಹಾಗೂ ಭಕ್ತರನ್ನು ಸಮರ್ಥವಾಗಿ ಮುನ್ನಡೆಸುವ ದಕ್ಷತೆಯನ್ನು ಹೊಂದಿದ್ದು, ಅವರಿಗೆ ಸಾರ್ವಜನಿಕರು ಹಾಗೂ ಕುಲಬಾಂಧವರು ಬೆಂಬಲವಾಗಿ ನಿಲ್ಲಬೇಕು. ಈ ಮೂಲಕ ಶ್ರೀಗಳ ಅಭಿಲಾಷೆಯನ್ನು ಈಡೇರಿಸಬೇಕಾಗಿದೆ ಎಂದು ಹೇಳಿದರು.

ಎಂ.ಜೆ.ಶ್ರೀಕಂಠಯ್ಯ. ವಿ.ಟಿ.ರವಿಕುಮಾರ್, ಚಂದ್ರು, ಪುಟ್ಟಸ್ವಾಮಿ, ಕೃಷ್ಣೇಗೌಡ, ಕೇಶವಕುಮಾರ್, ಎಂ.ಡಿ.ಮಹಾಲಿಂಗಯ್ಯ, ವೀರಣ್ಣ, ರಜಿನಿರಾಜ್, ಮಹಾಲಿಂಗಯ್ಯ, ಗುರುಸ್ವಾಮಿ, ದೊರೆಸ್ವಾಮಿ, ರವಿ ಇದ್ದರು.