ಜಿಲ್ಲೆ

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನನಲ್ಲಿ ಉಗ್ರರ ಗುಂಡಿನ ದಾಳಿಯಿಂದ ಸಾವನ್ನಪ್ಪಿದವರಿಗೆ ಮಾಜಿ ಯೋಧರು ಹಾಗೂ ಕಾರ್ಗಿಲ್ ವಿಜಯ್ ಸ್ಮಾರಕ ಸಮಿತಿ ಕಾರ್ಯಕರ್ತರು ಮತ್ತು ನಾಗರಿಕರು ನಗರದ ಕಾರ್ಗಿಲ್ ಸ್ತೂಪದ ಬಳಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು.

ಕೆಲ ವರ್ಷಗಳಿಂದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಕಡಿಮೆಯಾಗಿತ್ತು. ಈಗ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಅಮಾಯಕರನ್ನು ಬಲಿ ಪಡೆದ ಉಗ್ರರಿಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕು. ಉಗ್ರರ ಅಡಗುತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ರೀತಿ ದಾಳಿ ನಡೆಸಿ ಹುಟ್ಟಡಗಿಸಬೇಕು ಎಂದು ಮಾಜಿ ಯೋಧರು ಆಗ್ರಹಿಸಿದರು.

ಪ್ರವಾಸಕ್ಕೆ ತೆರಳಿದ್ದ ಅಮಾಯಕ ಹಿಂದುಗಳನ್ನು ಗುರಿಯಾಗಿಸಿಕೊಂಡು ಮತಾಂಧ ಭಯೋತ್ಪಾದಕರು ಕ್ರೌರ್ಯ ಮೆರೆದಿದ್ದಾರೆ. ಉಗ್ರರ ದಾಳಿಯಲ್ಲಿ 26 ಜನ ಬಲಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಹಿಂದೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಡೆದ ಸರ್ಜಿಕಲ್ ಸ್ಟ್ರೈಕ್ ನಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಚಂದ್ರಶೇಖರ ಅಮೀನಗಡ, ಬಸವರಾಜ ತಾಳಿಕೋಟಿ, ಸದಾನಂದ ಡಂಗನವರ, ಬಸವರಾಜ ತಾಳಿಕೋಟಿ, ಆನಂದ ಕುಲಕರ್ಣಿ, ಸಂಜಯ ಪಾಟೀಲ, ಮಹಾಂತೇಶ ಲಿಂಬೆಣ್ಣದೇವರಮಠ, ಭೀಮಪ್ಪ ಜಾಧವ, ಸತೀಶ ತೊರಗಲ್ಲ, ಉಳವಪ್ಪ ತಿರ್ಲಾಪೂರ, ಇತರರಿದ್ದರು.