ಶಿರಹಟ್ಟಿ; ಕಾಶ್ಮೀರದಲ್ಲಿ ಹಿಂದು ಸಮುದಾಯದ ಮೇಲೆ ನಡೆದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ನಗರ ಘಟಕ ಹಾಗೂ ಯುವಮೋರ್ಚಾ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ, ಮಂಡಲ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಬರ್ ಸಾಬ್ ಯಾದಗಿರಿ, ಒಬಿಸಿ ಘಟಕದ ಅಧ್ಯಕ್ಷ ರಾಮಣ್ಣ ಕಂಬಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ವಡವಿ, ಯಲ್ಲಪ್ಪ ಇಂಗಳಗಿ, ಪರಶು ಡೊಂಕುಬಳ್ಳಿ, ಯುವಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕಬಾಡಿ, ಸಂತೋಷ ತೊಡೆಕರ್, ಶಶಿ ಪೂಜಾರ, ಶರಣು ಹೊಸೂರ ಭಾಗವಹಿಸಿದ್ದರು.