ರಾಜ್ಯಮಟ್ಟದ ಗ್ರೀಕ್ ರೋಮ್ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕೆ.ಎಸ್.ಸೋಮಾಚಾರ್ ಅವರನ್ನು ಗುರುವಾರ ಕಿಕ್ಕೇರಿಯಲ್ಲಿ ವಿಶ್ವಕರ್ಮ ಹೋಬಳಿ ಸಂಘದಿಂದ ಗೌರವಿಸಲಾಯಿತು. ವೀಣಾ, ಗೋಪಾಲಕೃಷ್ಣ, ರಾಮಾಚಾರ್, ಗೋವರ್ಧನಾಚಾರ್, ಮಹೇಶ್, ಯೋಗಾಚಾರ್, ದಯಾನಂದಕುಮಾರ್, ದಿವಾಕರ್, ಗುರುಮೂರ್ತಿ ಇದ್ದರು. 
ಜಿಲ್ಲೆ

ಕುಸ್ತಿಪಟು ಕೆ.ಎಸ್.ಸೋಮಾಚಾರ್‌ಗೆ ಸನ್ಮಾನ

ರವಿಕುಮಾರ್ ಪಿ. ಕೆ

ಕಿಕ್ಕೇರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ 87 ಕೆ.ಜಿ. ವಿಭಾಗದ ಗ್ರೀಕ್ ರೋಮ್ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾಡಚೇರಿ ಗ್ರಾಮ ಆಡಳಿತಾಧಿಕಾರಿ ಕೆ.ಎಸ್.ಸೋಮಾಚಾರ್ ಅವರನ್ನು ಗುರುವಾರ ವಿಶ್ವಕರ್ಮ ಹೋಬಳಿ ಸಂಘದಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಗೆಲುವು ಕಠಿಣ ಶ್ರಮ, ಗುರುಗಳು ನೀಡಿದ ಕಾಣಿಕೆಯಾಗಿದೆ. ಉದ್ಯೋಗದ ಜತೆ ಎಷ್ಟೇ ಒತ್ತಡವಿದ್ದರೂ ಸ್ವಲ್ಪ ವೇಳೆ ಕಸರತ್ತು ಮಾಡುತ್ತಿದ್ದೆ. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಕ್ಕೆ ಕೀರ್ತಿ ತರುವ ಆಸೆ ನನ್ನದು ಎಂದರು.

ಗೋವರ್ಧನಾಚಾರ್ ವಿಶ್ವಕರ್ಮ ಮಾತನಾಡಿ, ಕೆ.ಎಸ್.ಸೋಮಾಚಾರ್ ಮಾಡಿರುವ ಸಾಧನೆ ಪ್ರಶಂಸನೀಯ ಎಂದರು.

ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ವಿಶ್ವಕರ್ಮ ಸಮಾಜದ ರಾಮಾಚಾರ್, ಗೋವರ್ಧನಾಚಾರ್, ಮಹೇಶ್, ಜೆಡಿಎಸ್ ತಾಲೂಕು ವಿಶ್ವಕರ್ಮ ಘಟಕದ ಅಧ್ಯಕ್ಷ ಯೋಗಾಚಾರ್, ತಾಲೂಕು ವಿಶ್ವಕರ್ಮ ನೌಕರ ಸಂಘದ ಕಾರ್ಯದರ್ಶಿ ದಯಾನಂದಕುಮಾರ್, ಗುರುಮೂರ್ತಿ, ದಿವಾಕರ್, ಗ್ರಾಮ ಆಡಳಿತಾಧಿಕಾರಿ ಕೆ. ತಿಪ್ಪೇಶ್, ಕಾಂತೇಶ್, ಪ್ರಸನ್ನ, ಶಶಿಕುಮಾರ್ ಮಡ್ಡಿ, ಸುನಿಲ್ ಗಾಣಿಗೇರ, ಪರಿಮಳಾ, ವನಜಾಕ್ಷಿ ಮತ್ತಿತರರಿದ್ದರು.